ದಾವಣಗೆರೆ ದಕ್ಷಿಣ: 38 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ; 23 ಮುಸ್ಲಿಮರು ಸ್ಪರ್ಧೆ! ಶಾಮನೂರು ಕುಟುಂಬಕ್ಕೆ ಸವಾಲ್


 ಕರ್ನಾಟಕ ಉಪ ಚುನಾವಣೆ ನಾಮಪತ್ರ ಸಲ್ಲಿಕೆ ಸೋಮವಾರ ಮುಕ್ತಾಯಗೊಂಡಿದೆ. 38 ಅಭ್ಯರ್ಥಿಗಳು ದಾವಣಗೆರೆ ದಕ್ಷಿಣದಿಂದ ಸ್ಪರ್ಧೆಗೆ ಮುಂದಾಗಿದ್ದಾರೆ. ಕಾಂಗ್ರೆಸ್‌ ಟಿಕೆಟ್‌ ಸಿಕ್ಕಿಲ್ಲ ಎಂಬ ಬೇಸರದಲ್ಲಿರುವ ಅಲ್ಪಸಂಖ್ಯಾತ ಸಮುದಾಯದಿಂದ ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. 38ರ ಪೈಕಿ 23 ಮಂದಿ ಮುಸ್ಲಿಮರು. ಬಿಜೆಪಿ ಕಾಂಗ್ರೆಸ್ ಹೊರತುಪಡಿಸಿದರೆ ಯಾವ ಪಕ್ಷದಿಂದ ಯಾರೆಲ್ಲಾ ಸ್ಪರ್ಧೆ ಮಾಡಿದ್ದಾರೆ? ಈ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.

ದಾವಣಗೆರೆ: ಕರ್ನಾಟಕ ಉಪ ಚುನಾವಣೆ ನಾಮಪತ್ರ ಸಲ್ಲಿಕೆಗೆ ಸೋಮವಾರ ಕಡೆಯ ದಿನವಾಗಿದ್ದು, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 38 ಮಂದಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಈ ಪೈಕಿ 23 ಮಂದಿ ಮುಸ್ಲಿಮರಿದ್ದಾರೆ. ಇದು ಕಾಂಗ್ರೆಸ್‌ ಟಿಕೆಟ್‌ ಕೈತಪ್ಪಿತು ಎಂದು ಶಾಮನೂರು ಕುಟುಂಬದ ವಿರುದ್ಧ ಅಲ್ಪಸಂಖ್ಯಾತರು ಸವಾಲು ಹಾಕಿದಂತೆ ಕಾಣುತ್ತಿದೆ.

ಉಪ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಸೋಮವಾರ ದಾವಣಗೆರೆ ದಕ್ಷಿಣ ವಿಧಾನಸಭೆ ಕ್ಷೇತ್ರದಿಂದ ಒಟ್ಟು 35 ನಾಮಪತ್ರಗಳು ಸಲ್ಲಿಕೆಯಾಗಿವೆ. ಈ ಮೂಲಕ ಕ್ಷೇತ್ರದಲ್ಲಿಸ್ಪರ್ಧೆ ಬಯಸಿ ಒಟ್ಟು 38 ಅಭ್ಯರ್ಥಿಗಳು 45 ನಾಮಪತ್ರ ಸಲ್ಲಿಸಿದ್ದಾರೆ.

ಬಿಜೆಪಿ ಕಾಂಗ್ರೆಸ್‌ ಹೊರತು ಪಡಿಸಿದರೆ 12 ಇತರೆ ಪಕ್ಷಗಳಿಂದ ಸ್ಪರ್ಧೆಗೆ ಮುಂದಾಗಿದ್ದಾರೆ. ಇನ್ನು ಸ್ವತಂತ್ರ ಸ್ಪರ್ಧಿಗಳಾಗಿ 21 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಅಲ್ಪಸಂಖ್ಯಾತ ಮತತಗಳು ಹೆಚ್ಚಿರುವ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಸ್ಪರ್ಧಿಗಳು ಅಧಿಕ ಸಂಖ್ಯೆಯಲ್ಲಿದ್ದಾರೆ. ಒಟ್ಟು 23 ಮಂದಿ ಮುಸ್ಲಿಂ ಸಮುದಾಯದ ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ.

ಯಾರೆಲ್ಲಾ ಪ್ರಮುಖರು ನಾಮಪತ್ರ ಸಲ್ಲಿಕೆ?

ಕಾಂಗ್ರೆಸ್‌ನಿಂದ ಸಮರ್ಥ್‌ ಶಾಮನೂರು (4 ನಾಮಪತ್ರ)

ಬಿಜೆಪಿಯಿಂದ ಶ್ರೀನಿವಾಸ ಟಿ. ದಾಸಕರಿಯಪ್ಪ (4 ನಾಮಪತ್ರ) ಹಾಗೂ ಯಶವಂತರಾವ್‌ ಜಾಧವ್‌

ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿಯಾಗಿ (ಸ್ವತಂತ್ರ) ಸಾದಿಕ್‌ ಪೈಲ್ವಾನ್‌ (3 ನಾಮಪತ್ರ

ಇತರೆ ಯಾವೆಲ್ಲಾ ಅಭ್ಯರ್ಥಿಗಳು ಸ್ಪರ್ಧೆ?

ಕೆ.ಎಸ್‌.ಶಿವಕುಮಾರಪ್ಪ (ಆಮ್‌ ಆದ್ಮಿ ಪಾರ್ಟಿ)

ಖಾಜಾ ಮೋಹಿದ್ದೀನ್‌ ಗುಡಗೇರಿ (ಬ್ಲೂಇಂಡಿಯಾ ಪಾರ್ಟಿ)

ಶಾಬಾಜುಲ್ಲಾಖಾನ್‌ (ಯಂಗ್‌ಸ್ಟರ್‌ ಎಂಪವರ್‌ಮೆಂಟ್‌ ಪಾರ್ಟಿ)

ಅಫ್ಸರ್‌ ಕೆ.ಬಿ., ಇಸ್ಮಾಯಿಲ್‌ ಜಬಿವುಲ್ಲಾ(ಎಸ್‌ಡಿಪಿಐ)

ಈಶ್ವರ (ಉತ್ತಮ ಪ್ರಜಾಕೀಯ ಪಕ್ಷ)

ಸೈಯ್ಯದ್‌ ಇಮ್ತಿಯಾಜ್‌ (ಜನಹಿತ ಪಕ್ಷ)

ಜಿ.ಎನ್‌.ಪ್ರಶಾಂತ್‌ಕುಮಾರ್‌ (ಜನತಾ ಚಳವಳಿ ಪಾರ್ಟಿ)

ಎಂ.ಜಿ.ಶ್ರೀಕಾಂತ್‌ (ನವಭಾರತ್‌ ಸೇನಾ)

ಎ.ಟಿ.ದಾದಾಕಲಂದರ್‌ (ಕಂಟ್ರಿ ಸಿಟಿಜನ್‌ ಪಾರ್ಟಿ)

ಈರಣ್ಣ (ಇಂಡಿಯನ್‌ ಪೊಲಿಟಿಕಲ್‌ ಕಾಂಗ್ರೆಸ್‌)

ಎಚ್‌.ಕೆ.ದಾವುಲ್‌ ಸಾಬ್‌ (ಕರ್ನಾಟಕ ರಾಷ್ಟ್ರ ಸಮಿತಿ)

ಶ್ರೀನಿವಾಸ ಎಂ.ಸಿ. (ಭಾರತೀಯ ಪ್ರಜೆಗಳ ಕಲ್ಯಾಣ ಪಕ್ಷ)


ಸ್ವತಂತ್ರ ಅಭ್ಯರ್ಥಿಗಳಾಗಿ ಯಾರೆಲ್ಲಾ ನಾಮಪತ್ರ ಸಲ್ಲಿಕೆ?

ಗೌತಮ್‌ ಕುಮಾರ್‌ ಯು. ಜೈನ್‌

ಡಿ.ಸಯ್ಯದ್‌ ರಿಯಾಜ್‌

ಯು.ಎಂ.ಮನ್ಸೂರ್‌ ಅಲಿ

ಸೈಯ್ಯದ್‌ ಚಾಂದ್‌ಪೀರ್‌

ಸಿ.ಎಂ.ಮಂಜುನಾಥಯ್ಯಸ್ವಾಮಿ

ಎಚ್‌.ಸುಬಾನ್‌ ಸಾಬ್‌

ಸೈಯ್ಯದ್‌ ಜಬಿವುಲ್ಲಾ ಸಾಜಿದ್‌

ಡಿ.ಹನುಮಂತಪ್ಪ

ಆನಂದಪ್ಪ ಎಸ್‌.ಎಲ್‌.

ಎಸ್‌.ಕೆ.ಅಫ್ಜಲ್‌ ಖಾನ್‌

ಅಲ್ಲಾಬಕ್ಷ್‌ ಬಿ

ಎಚ್‌.ಪವೀರ್‍ಜ್‌

ಎಸ್‌.ಸಿ.ತ್ರಿಮೂರ್ತಿ

ಅಮೀರ್‌ ಅಹಮದ್‌ ಖಾನ್‌

ಟಿ.ಜಬೀನ್‌ತಾಜ್‌

ಕೆ.ಎಚ್‌.ಮಹಬೂಬ್‌

ಸುಭಾನ್‌ ಖಾನ್‌

ಖಾದರ್‌ ಆದಿಲ್‌ ಬಾಷ

ಮೊಹಮದ್‌ ಜಬಿವುಲ್ಲಾ

ಬಿ.ರಾಜಶೇಖರ್‌


ಅಲ್ಪಸಂಖ್ಯಾತ ಮತಗಳು ಹಂಚಿಹೋಗುವ ಸಾಧ್ಯತೆ!

ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಮರು ಕಣದಲ್ಲಿದ್ದಾರೆ. ಅದರಲ್ಲಿ ಬಹುತೇಕರು ಕಾಂಗ್ರೆಸ್‌ ಟಿಕೆಟ್‌ ಸಿಗಲಿಲ್ಲವೆಂದು ಸೇಡಿನಿಂದ ಸ್ಪರ್ಧೆ ಮಾಡಿರುವು ಸಾಧ್ಯತೆ ಇದೆ. ಹೀಗಾಗಿ, ಕ್ಷೇತ್ರದ ಅತಿ ಹೆಚ್ಚು ಮತಗಳನ್ನು ಹೊಂದಿರುವ ಅಲ್ಪಸಂಖ್ಯಾತ ಸಮುದಾಯವು ಗೊಂದಲಕ್ಕೆ ಒಳಗಾಗುವ ಸಾಧ್ಯತೆ ಇದೆ. ಜತೆಗೆ ಮತಗಳು ಕೂಡ ಹಂಚಿಹೋಗಿ ಕಾಂಗ್ರೆಸ್‌ಗೆ ತುಸು ಹಿನ್ನೆಡೆಯಾಗುವ ಸಾಧ್ಯತೆ ಇದೆ.

Comments

Popular posts from this blog

ದಾವಣಗೆರೆ ಕಾರ್ಗಿಲ್​ ಕಾರ್ಖಾನೆಯಲ್ಲಿ ಉತ್ಪಾದನೆ ಸ್ಥಗಿತ: ನ್ಯಾಯಕ್ಕಾಗಿ ಕಾರ್ಮಿಕರು ಹೋರಾಟ

ದಾವಣಗೆರೆ: ಪೊಲೀಸರ ಮೇಲೆ ಕಾಂಗ್ರೆಸ್ ಮುಖಂಡನ ಪುತ್ರರಿಂದ ಹಲ್ಲೆ; ಮೊಬೈಲ್ ಕಸಿದು ದಾಂಧಲೆ!

ಲೋಕಾಯುಕ್ತ ದಾಳಿ: ಬಿಡಿಎ ಅರಣ್ಯಾಧಿಕಾರಿ ಮನೆಯಲ್ಲಿ ₹3.08 ಕೋಟಿ ಮೌಲ್ಯದ ಅಕ್ರಮ ಆಸ್ತಿ ಪತ್ತೆ!