ದಾವಣಗೆರೆ ದಕ್ಷಿಣ: ಬಿಜೆಪಿ ಅಭ್ಯರ್ಥಿ 5 ಕೋಟಿ ರೂ. ಒಡೆಯ


ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆಗೆ ಬಿಜೆಪಿ ರಾಜ್ಯ ಎಸ್ಟಿ ಮೋರ್ಚಾದ ಉಪಾಧ್ಯಕ್ಷ ಶ್ರೀನಿವಾಸ್‌ ದಾಸಕರಿಯಪ್ಪ ಅಭ್ಯರ್ಥಿ ಎಂದು ಘೋಷಣೆ ಮಾಡಿದೆ. ಶುಕ್ರವಾರ ಅವರು ಸಾಂಕೇತಿಕವಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.


ಏಪ್ರಿಲ್ 9ರಂದು ಉಪ ಚುನಾವಣೆ ನಡೆಯಲಿದ್ದು, ಮೇ 4ರಂದು ಫಲಿತಾಂಶ ಪ್ರಕಟವಾಗಲಿದೆ. ಮಾರ್ಚ್ 23ರ ಸೋಮವಾರ ಪುನಃ ಬಿಜೆಪಿ ನಾಯಕರ ಜೊತೆ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ.

ದಾವಣಗೆರೆ ಬಿಜೆಪಿಯಲ್ಲಿ ಬಣ ರಾಜಕೀಯವಿದೆ ಎಂಬ ಆರೋಪಗಳ ನಡುವೆಯೇ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ವಿರೋಧಿ ಬಣಕ್ಕೆ ಟಿಕೆಟ್ ನೀಡಲಾಗಿದೆ. ಆದ್ದರಿಂದ ಉಪ ಚುನಾವಣೆಯಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ಮಾಡುವರೇ? ಎಂಬುದು ಪ್ರಶ್ನೆಯಾಗಿದೆ.

ಆಸ್ತಿ ವಿವರ: ಶ್ರೀನಿವಾಸ್‌ ದಾಸಕರಿಯಪ್ಪ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸುವಾಗ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡೆವಿಟ್‌ನಲ್ಲಿ ಆಸ್ತಿ ವಿವರದ ಕುರಿತು ಉಲ್ಲೇಖಿಸಿದ್ದಾರೆ. ಉಪ ಚುನಾವಣೆ ಬಿಜೆಪಿ ಅಭ್ಯರ್ಥಿ 5.75 ಕೋಟಿ ರೂ. ಒಡೆಯ, ಸಾಲ 2.96 ಲಕ್ಷ ರೂ. ಇದೆ.

ಒಟ್ಟು ಆಸ್ತಿ 5.75 ಕೋಟಿ ರೂ.
ನಗದು 3.60 ಲಕ್ಷ ರೂ.
ಒಟ್ಟು ಚರಾಸ್ತಿ 34.79 ಲಕ್ಷ ರೂ.
ಸ್ಥಿರಾಸ್ತಿ 5.41 ಕೋಟಿ ರೂ.
ವಾಹನ 4 ಬೈಕ್, 1 ಕಾರು
ಚಿನ್ನ 120 ಗ್ರಾಂ
ಸಾಲ 2.96 ಲಕ್ಷ ರೂ.ಗಳು
ಅಪರಾಧ ಪ್ರಕರಣಗಳು ಇಲ್ಲ

ಪತ್ನಿ ಸಂಧ್ಯಾ ಎಸ್. ಆಸ್ತಿ ವಿವರ

ಒಟ್ಟು ಆಸ್ತಿ ಮೌಲ್ಯ 15.94 ಲಕ್ಷ
ನಗದು 90,000
ಚಿನ್ನ 120 ಗ್ರಾಂ
ತಾಯಿ ರಂಗಮ್ಮ ಆಸ್ತಿ ವಿವರ

ಒಟ್ಟು ಆಸ್ತಿ ಮೌಲ್ಯ 12.14 ಲಕ್ಷ
ನಗದು 5000
ಚಿನ್ನ 100 ಗ್ರಾಂ ಹೊಂದಿದ್ದಾರೆ .

Comments

Popular posts from this blog

ಚಾರ್ವಿಕ ಟೂರ್ಸ್ ಅಂಡ್ ಟ್ರಾವೆಲ್ಸ್‌ನಿಂದ ಪ್ರಥಮ ವರ್ಷದ ವಾರ್ಷಿಕೋತ್ಸವದ ಧಮಾಕಾ ಆಫರ್; ಕೇವಲ ₹2,100 ರಲ್ಲಿ 4 ವರ್ಷಗಳ ಸುದೀರ್ಘ ಪ್ರವಾಸ ಯೋಜನೆ!

ದಾವಣಗೆರೆ ಕಾರ್ಗಿಲ್​ ಕಾರ್ಖಾನೆಯಲ್ಲಿ ಉತ್ಪಾದನೆ ಸ್ಥಗಿತ: ನ್ಯಾಯಕ್ಕಾಗಿ ಕಾರ್ಮಿಕರು ಹೋರಾಟ

ತಂದೆ-ತಾಯಿಯ 13 ವರ್ಷಗಳ ಕನಸು ನನಸು ಮಾಡಿದ ಮಗ: ಕಟ್ಟಿಗೆಹಳ್ಳಿಯಲ್ಲಿ ಅದ್ದೂರಿ ಗೃಹಪ್ರವೇಶ!