ತೊಂದರೆ ಇದ್ದ ಬಲಗೈ ಬಿಟ್ಟು ಎಡಗೈಗೆ ಶಸ್ತ್ರಚಿಕಿತ್ಸೆ ಮಾಡಿ ಬೆರಳು ಕತ್ತರಿಸಿದ ವೈದ್ಯರು!


 ಮುಂಬೈ: ವೈದ್ಯರೆಂದರೆ ಜೀವ ಉಳಿಸುವ ರಕ್ಷಕ ಆದ್ರೆ ಇಲ್ಲೊಂದು ಘಟನೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಬಾಲಕನೊಬ್ಬ ತನ್ನ ಕೈ ಬೆರಳನ್ನು ಕಳೆದುಕೊಂಡಿರುವ ಘಟನೆಯೊಂದು ಬೆಳಕಿಗೆ ಬಂದಿದೆ.


ಪೋಸ್ಟಾಕ್ಸಿಯಲ್ ಪಾಲಿಡಾಕ್ಟಿಲಿ ಅಂದ್ರೆ ಕೈ ಅಥವಾ ಪಾದದ ಕಿರುಬೆರಳಿನ ಬದಿಯಲ್ಲಿ ಹೆಚ್ಚುವರಿ ಬೆರಳು ಇರುವ ಸಮಸ್ಯೆ ಈ ತೊಂದರೆಯಿಂದ ಬಳಲುತ್ತಿದ್ದ ಬಾಲಕನೊಬ್ಬನಿಗೆ ವೈದ್ಯರು ಬಲಗೈಗೆ ಶಸ್ತ್ರ ಚಿಕಿತ್ಸೆ ಮಾಡುವ ಬದಲು ಎಡಗೈಗೆ ಮಾಡಿದ್ದಲ್ಲದೆ, ಬೆರಳನ್ನು ಕೂಡ ಕತ್ತರಿಸಿರುವ ಘಟನೆ ಮುಂಬೈನಲ್ಲಿ ನಡೆದಿದೆ.

ಬಲಗೈಯ ಒಂದು ಬೆರಳಿನಲ್ಲಿ ಬಿಗಿತ, ನೋವು ಇದ್ದ ಕಾರಣ ಶಸ್ತ್ರ ಚಿಕಿತ್ಸೆ ನಡೆಸಬೇಕೆಂದು ವೈದ್ಯರು ಸಲಹೆ ನೀಡಿದ್ದರು ಇದಕ್ಕಾಗಿ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ವೈದ್ಯರು ತಪ್ಪು ತಪ್ಪಾಗಿ ಶಸ್ತ್ರ ಚಿಕಿತ್ಸೆ ನಡೆಸಿದ್ದು ದೋಷ ಕಂಡುಬಂದ ನಂತರ ಬಾಲಕನ ಕುಟುಂಬ ತಕ್ಷಣ ದೂರು ದಾಖಲಿಸಿದೆ.

ಈ ಆರೋಪದ ಬಳಿಕ ಆರೋಗ್ಯ ಇಲಾಖೆ ವಿವರವಾದ ತನಿಖೆ ನಡೆಸಲು ಇಬ್ಬರು ಸದಸ್ಯರ ಸಮಿತಿಯನ್ನು ರಚಿಸಿತು. ಈ ವೇಳೆ ಮಗುವಿನ ಕುಟುಂಬ ಬಲಗೈಯಲ್ಲಿ ಶಸ್ತ್ರಚಿಕಿತ್ಸೆಗೆ ಅನುಮತಿ ನೀಡುವ ಎನ್‌ಒಸಿ ಗೆ ಸ್ಪಷ್ಟವಾಗಿ ಸಹಿ ಹಾಕಿದ್ದೇವೆ ಎಂದು ಹೇಳಿದ್ದು, ಇದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

Comments

Popular posts from this blog

ಚಾರ್ವಿಕ ಟೂರ್ಸ್ ಅಂಡ್ ಟ್ರಾವೆಲ್ಸ್‌ನಿಂದ ಪ್ರಥಮ ವರ್ಷದ ವಾರ್ಷಿಕೋತ್ಸವದ ಧಮಾಕಾ ಆಫರ್; ಕೇವಲ ₹2,100 ರಲ್ಲಿ 4 ವರ್ಷಗಳ ಸುದೀರ್ಘ ಪ್ರವಾಸ ಯೋಜನೆ!

ದಾವಣಗೆರೆ ಕಾರ್ಗಿಲ್​ ಕಾರ್ಖಾನೆಯಲ್ಲಿ ಉತ್ಪಾದನೆ ಸ್ಥಗಿತ: ನ್ಯಾಯಕ್ಕಾಗಿ ಕಾರ್ಮಿಕರು ಹೋರಾಟ

ತಂದೆ-ತಾಯಿಯ 13 ವರ್ಷಗಳ ಕನಸು ನನಸು ಮಾಡಿದ ಮಗ: ಕಟ್ಟಿಗೆಹಳ್ಳಿಯಲ್ಲಿ ಅದ್ದೂರಿ ಗೃಹಪ್ರವೇಶ!