ದಾವಣಗೆರೆ ದಕ್ಷಿಣ: ಸಮರ್ಥ್ ಶಾಮನೂರು ಆಸ್ತಿ ವಿವರ ಘೋಷಣೆ; UK ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲಿ ಕಲಿಕೆ


 

ದಾವಣಗೆರೆ ದಕ್ಷಿಣ: ಸಮರ್ಥ್ ಶಾಮನೂರು ಆಸ್ತಿ ವಿವರ ಘೋಷಣೆ; UK ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲಿ ಕಲಿಕೆ



ಕರ್ನಾಟಕ ಉಪ ಚುನಾವಣೆಗೆ ಸಂಬಂಧಿಸಿದಂತೆ ದಾವಣಗೆರೆ ದಕ್ಷಿಣದ ಅಭ್ಯರ್ಥಿಯಾಗಿ ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗ ಸಮರ್ಥ್ ಶಾಮನೂರು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಅವರ ಬಳಿ 2.17 ಕೋಟಿ ರೂ. ಚರಾಸ್ತಿ, 2.08 ಕೋಟಿ ಸ್ಥಿರಾಸ್ತಿ ಹೊಂದಿದ್ದಾರೆ. ಮೂರೂವರೆ ಕೋಟಿ ರೂ. ಸಾಲ ಹೊಂದಿದ್ದಾರೆ. ವಿದ್ಯಾಭ್ಯಾಸ ನೋಡಿದರೆ ಇಂಗ್ಲೆಂಡ್‌ನಲ್ಲಿ ಡಿಗ್ರಿ ಮಾಡಿಕೊಂಡು ಬಂದಿದ್ದಾರೆ.

ಬೆಂಗಳೂರು: ಕರ್ನಾಟಕ ಉಪ ಚುನಾವಣೆಗೆ ಸಂಬಂಧಿಸಿದಂತೆ ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ಶಾಮನೂರು ಶಿವಶಂಕರಪ್ಪ ಮೊಮ್ಮಗ ಸಮರ್ಥ್ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಸದ್ಯ ಅವರ ಆಸ್ತಿ ವಿವರವನ್ನು ಚುನಾವಣಾ ಆಯೋಗ ಬಹಿರಂಗಪಡಿಸಿದೆ

ಸಚಿವ ಎಸ್‌ಎಸ್‌ ಮಲ್ಲಿಕಾರ್ಜುನ್‌ - ಪ್ರಭಾ ಮಲ್ಲಿಕಾರ್ಜುನ ದಂಪತಿ ಮೊದಲ ಪುತ್ರ ಸಮರ್ಥ್‌ ಬಳಿ 2.17 ಕೋಟಿ ರೂ. ಚರಾಸ್ತಿ, 2.08 ಕೋಟಿ ರೂ. ಸ್ಥಿರಾಸ್ತಿ ಸೇರಿ 4.25 ಕೋಟಿ ಆಸ್ತಿ ಘೋಷಣೆ ಮಾಡಿಕೊಂಡಿದ್ದಾರೆ. ಹೊಣೆಗಾಗಿಕೆ/ ಸಾಲ ಒಟ್ಟು 3.52 ಕೋಟಿ ರೂ. ಸರ್ಮರ್ಥ್‌ ಮೇಲಿದೆ. ಇನ್ನು ಸ್ವಂತ ಕಾರು/ ವಾಹನಗಳನ್ನು ಹೊಂದಿಲ್ಲ. ಪಿತ್ರಾರ್ಜಿತ ಆಸ್ತಿ ಬಂದಿಲ್ಲ ಎಂದು ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿದ್ದಾರೆ.

ಸಮರ್ಥ್‌ ಚರಾಸ್ತಿ ಏನೆಲ್ಲಾ ಇದೆ?

ಕೈಯಲ್ಲಿ ನಗದು - 8.35 ಲಕ್ಷ ರೂ.
ಬ್ಯಾಂಕ್‌ನಲ್ಲಿ ಠೇವಣಿ - 9,89,217 ರೂ.
ಬಾಂಡ್‌, ಷೇರು, ಮ್ಯೂಚುವಲ್ ಫಂಡ್‌ ಸೇರಿ ಇತರೆ ಹೂಡಿಕೆ - 30,00,000 ರೂ.
ಪೋಸ್ಟ್‌ ಆಫೀಸ್‌, ವಿವಿಧ ವಿಮೆ ಕಂಪನಿಗಳ ಹೂಡಿಕೆ - 1,04.66,756 ರೂ.
ಸಾಲ ಕೊಟ್ಟಿರುವುದು - 14,77.412 ರೂ.
ಆಭರಣ ಬೆಲೆ ಬಾಳುವ ವಸ್ತುಗಳು - 14,45,800 ರೂ.
ಮೊಬೈಲ್ ಕಂಪ್ಯೂಟರ್‌ಗಳು - 34,97,066 ರೂ.
ಒಟ್ಟು ಚರಾಸ್ತಿ - 2,17,11,792 ರೂ. (2.17 ಕೋಟಿ ರೂ.)

ಎರಡು ಕಡೆ ಕೋಟಿ ಬೆಲೆ ಬಾಳುವ ಜಮೀನು
ಸ್ಥಿರಾಸ್ತಿ ನೋಡುವುದಾದರೆ ಸಮರ್ಥ್‌ಗೆ ಆನೇಕೊಂಡ, ಬೇತೂರು ಬಳಿ 6.1 ಎಕರೆ ಜಮೀನು ಇದೆ. ಇದರ ಮೌಲ್ಯ 2,08,06,818 ರೂ. ಇನ್ನೂ ಹೊಣೆಗಾರಿಕೆ/ ಸಾಲ 3,52,79,114 ರೂ ಇದೆ.

ಸಮರ್ಥ್ ಶಾಮನೂರು ವಿದ್ಯಾಭ್ಯಾಸ ಏನು?
ದೇಶದ ಪ್ರತಿಷ್ಠಿತ ಶಾಲೆಯಲ್ಲಿ ಓದಿದ್ದು ಮಾತ್ರವಲ್ಲದೇ ವಿದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲಿ ಡಿಗ್ರಿ ಪಡೆದಿದ್ದಾರೆ. 2015 ರಲ್ಲಿ 10 ನೇ ತರಗತಿ, 2017 ರಲ್ಲಿ ಪಿಯುಸಿಯನ್ನು ಕೊಡೈಕೆನಾಲ್‌ನ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಮುಗಿಸಿದ್ದಾರೆ. ಆ ಬಳಿಕ ಮೂರು ವರ್ಷ ಯು.ಕೆ (ಇಂಗ್ಲೆಂಡ್‌) ಎಕ್ಸೆಟರ್ ವಿಶ್ವವಿದ್ಯಾಲಯದಲ್ಲಿ ಬಿಸಿನೆಸ್‌ ಮತ್ತು ಮ್ಯಾನೇಜ್‌ಮೆಂಟ್‌ನಲ್ಲಿ ಪದವಿ ಪಡೆದಿದ್ದಾರೆ.

ಅಜ್ಜನ ಕಾರಿನಲ್ಲಿ ತೆರಳಿ ನಾಮಪತ್ರ ಸಲ್ಲಿಕೆ

ಅಜ್ಜ, ಶಾಮನೂರು ಶಿವಶಂಕರಪ್ಪನವರು ಬಳಸುತ್ತಿದ್ದ ಕಾರಿನಲ್ಲೇ ಕುಳಿತು ಪಾಲಿಕೆ ಕಚೇರಿಗೆ ಬಂದ ಸಮರ್ಥ್‌ ಶಾಮನೂರು ಮಲ್ಲಿಕಾರ್ಜುನ್‌, ಉಮೇದುವಾರಿಕೆ ಸಲ್ಲಿಸಿದರು. ಇದಕ್ಕೂ ಮುನ್ನ ನಗರದೇವತೆ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನಕ್ಕೆ ತೆರಳಿದ ಸಮರ್ಥ್‌, ದೇವಿ ಪಾದದಡಿ ಉಮೇದುವಾರಿಕೆ ಪತ್ರ ಇರಿಸಿ ಆಶೀರ್ವಾದ ಪಡೆದರು. ನಾಮಪತ್ರ ಸಲ್ಲಿಸಲು ಎಸ್‌ಎಸ್‌ಎಂ ನಿವಾಸದಿಂದ ಹೊರಟು, ನೇರವಾಗಿ ಅಜ್ಜಿ (ಡಾ.ಪ್ರಭಾ ತಾಯಿ) ಮನೆಗೆ ಹೋಗಿ ಅಜ್ಜಿ ಆಶೀರ್ವಾದ ಪಡೆದರು. 'ಈ ವೇಳೆ ಸುದ್ದಿಗಾರರ ಜತೆ ಮಾತನಾಡಿ, 'ಬಿ ಫಾರಂ ಸಿಕ್ಕೇ ಸಿಗುತ್ತದೆ ಎನ್ನುವ ಭರವಸೆ ಹಿನ್ನೆಲೆ ನಾಮಪತ್ರ ಸಲ್ಲಿಕೆ ಮಾಡುತ್ತಿದ್ದೇನೆ,' ಎಂದು ವಿಶ್ವಾಸ ವ್ಯಕ್ತಪಡಿಸಿದರು.

'ಜಿಲ್ಲೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಕಟ್ಟಿ ಬೆಳೆಸಿರುವುದೇ ಅಪ್ಪಾಜಿ ಶಾಮನೂರು ಶಿವಶಂಕರಪ್ಪನವರು. ತಾತನ ಕ್ಷೇತ್ರದಲ್ಲಿಅವರಂತೆಯೇ ಸೇವೆ ಸಲ್ಲಿಸುವ ಉದ್ದೇಶವಿದೆ. ಇವತ್ತು ಶುಕ್ರವಾರ, ಯುಗಾದಿ ಮತ್ತು ರಂಜಾನ್‌ ಹಬ್ಬಗಳ ಶುಭ ದಿನ ಇದಾಗಿದೆ. ದುರ್ಗಾದೇವಿ ಆಶಿರ್ವಾದ ಪಡೆದು ನಾಮಪತ್ರ ಸಲ್ಲಿಸುತ್ತಿದ್ದೇನೆ. ಅಲ್ಪಸಂಖ್ಯಾತರು ಸೇರಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತೇವೆ,' ಎಂದರು.

ಕಾಂಗ್ರೆಸ್‌ ಟಿಕೆಟ್‌ ಸಿಕ್ಕೇ ಸಿಗುತ್ತದೆ ಎಂದ ಡಾ.ಪ್ರಭಾ ಮಲ್ಲಿಕಾರ್ಜುನ್‌

ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್‌ ಮಾತನಾಡಿ, 'ಚುನಾವಣೆಗೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ರಾಜ್ಯ ಕಾಂಗ್ರೆಸ್‌ ಮುಖಂಡರ ನೇತೃತ್ವದಲ್ಲಿಸಭೆ ನಡೆಯುತ್ತಿದೆ. ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಅವರು ಬೆಂಗಳೂರಿನಲ್ಲಿದ್ದಾರೆ. ದಕ್ಷಿಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನಡೆದ ಸಮೀಕ್ಷೆಯ ವರದಿ ಗಮನಿಸಿದ್ದೇನೆ. ಪುತ್ರ ಸಮರ್ಥಗೆ ಕಾಂಗ್ರೆಸ್‌ ಟಿಕೆಟ್‌ ಸಿಕ್ಕೇ ಸಿಗುತ್ತದೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.

Comments

Popular posts from this blog

ಚಾರ್ವಿಕ ಟೂರ್ಸ್ ಅಂಡ್ ಟ್ರಾವೆಲ್ಸ್‌ನಿಂದ ಪ್ರಥಮ ವರ್ಷದ ವಾರ್ಷಿಕೋತ್ಸವದ ಧಮಾಕಾ ಆಫರ್; ಕೇವಲ ₹2,100 ರಲ್ಲಿ 4 ವರ್ಷಗಳ ಸುದೀರ್ಘ ಪ್ರವಾಸ ಯೋಜನೆ!

ದಾವಣಗೆರೆ ಕಾರ್ಗಿಲ್​ ಕಾರ್ಖಾನೆಯಲ್ಲಿ ಉತ್ಪಾದನೆ ಸ್ಥಗಿತ: ನ್ಯಾಯಕ್ಕಾಗಿ ಕಾರ್ಮಿಕರು ಹೋರಾಟ

ತಂದೆ-ತಾಯಿಯ 13 ವರ್ಷಗಳ ಕನಸು ನನಸು ಮಾಡಿದ ಮಗ: ಕಟ್ಟಿಗೆಹಳ್ಳಿಯಲ್ಲಿ ಅದ್ದೂರಿ ಗೃಹಪ್ರವೇಶ!