ಶ್ರೀ ಗುರು ಮಾರಿ ಕೊಟ್ಟೂರೇಶ್ವರ ದೇವಸ್ಥಾನದಲ್ಲಿ ಭಕ್ತರಿಗೆ ಅನ್ನ ದಾಸೋಹ
ದಾವಣಗೆರೆ: ಇಲ್ಲಿನ ಶ್ರೀ ಗುರು ಮಾರಿ ಕೊಟ್ಟೂರೇಶ್ವರ ದೇವಸ್ಥಾನದಲ್ಲಿ ಅಮಾವಾಸ್ಯೆಯ ಅಂಗವಾಗಿ ಭಕ್ತಾದಿಗಳಿಗೆ ವಿಶೇಷ ಅನ್ನ ಸಂತರ್ಪಣೆ ಹಾಗೂ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಅಮಾವಾಸ್ಯೆಯ ಪ್ರಯುಕ್ತ ದೇವಸ್ಥಾನಕ್ಕೆ ಆಗಮಿಸಿದ್ದ ಸುಮಾರು 500 ರಿಂದ 1000ಕ್ಕೂ ಹೆಚ್ಚು ಭಕ್ತಾದಿಗಳಿಗೆ ಅಂಬಳಿ ಗ್ರಾಮದ ನಿವೃತ್ತ ಮುಖ್ಯ ಗುರುಗಳಾದ ಶ್ರೀ ಬಿ. ಚಂದ್ರಪ್ಪ ಹಾಗೂ ಅವರ ಧರ್ಮಪತ್ನಿ ಶ್ರೀಮತಿ ಚಂದ್ರಮತಿ ಮತ್ತು ಅವರ ಕುಟುಂಬಸ್ಥರು ಅನ್ನ ದಾಸೋಹ ಸೇವೆಯನ್ನು ಮಾಡಿಸಿದರು.
ದೇವಸ್ಥಾನಕ್ಕೆ ಆಗಮಿಸಿದ ಭಕ್ತರಿಗೆ ಸಕಲ ವ್ಯವಸ್ಥೆಗಳೊಂದಿಗೆ ಅನ್ನ ಪ್ರಸಾದವನ್ನು ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಕುಟುಂಬದ ಸದಸ್ಯರಾದ ಶಿವಕುಮಾರ್ ಸರ್ ಅವರು ದೇವರಿಗೆ ವಿಶೇಷ ಪೂಜೆ ಹಾಗೂ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿಕೊಟ್ಟರು.
ಅಮಾವಾಸ್ಯೆಯ ಶುಭ ದಿನದಂದು ನಡೆದ ಈ ಅನ್ನ ದಾಸೋಹ ಸೇವೆಯು ಭಕ್ತರ ಮೆಚ್ಚುಗೆಗೆ ಪಾತ್ರವಾಯಿತು. ದೇವಸ್ಥಾನದ ಸಮಿತಿ ಹಾಗೂ ಸ್ಥಳೀಯರು ಈ ಭಕ್ತಿಪೂರ್ವಕ ಸೇವೆಗೆ ಸಾಕ್ಷಿಯಾದರು.
ಚದರಗೊಳ್ಳ ಸಿ ಜಿ ವಸಂತ್ ಕುಮಾರ್
ವರದಿ: ಟಿವಿ ನ್ಯೂಸ್ ಕನ್ನಡ ಏಷ್ಯನ್ ನೆಟ್‌ವರ್ಕ್, ಕೊಟ್ಟೂರು.



Comments
Post a Comment