8 ಗ್ರಾಂ ಚಿನ್ನ, ರೇಷ್ಮೆ ಸೀರೆ, ಫ್ರೀ ಬಸ್, 6 ಎಲ್‌ಪಿಜಿ ಗ್ಯಾಸ್: ಬರೀ ಸ್ಟಾರ್‌ಡಮ್ ಅಲ್ಲ ಟಿವಿಕೆ ಗೆಲುವಿಗೆ ಕಾರಣ ಈ ‘ಉಚಿತ ಭಾಗ್ಯ’ಗಳು; ಇಷ್ಟನ್ನೆಲ್ಲ ಕೊಡ್ತಾರಾ ವಿಜಯ್?


 ಇಂದು ( ಮೇ 4 ) ಏಪ್ರಿಲ್‌ನಲ್ಲಿ ನಡೆದ ತಮಿಳು ನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಅಡಳಿತಾರೂಢ ಡಿಎಂಕೆ ಕುರ್ಚಿ ಉಳಿಸಿಕೊಳ್ಳುವಲ್ಲಿ ವಿಫಲವಾಗಿದೆ.

ನೂತನ ಪಕ್ಷ ನಟ ವಿಜಯ್ ನೇತೃತ್ವದ ಟಿವಿಕೆ 106 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಸರ್ಕಾರ ರಚಿಸಲು ಬೇಕಾದ 118 ಸ್ಥಾನಗಳು ಇಲ್ಲದಿದ್ದರೂ ಸಹ ಇತರೆ ಪಕ್ಷಗಳ ಬೆಂಬಲದಿಂದ ಟಿವಿಕೆ ಅಧಿಕಾರದ ಚುಕ್ಕಾಣಿ ಹಿಡಿಯಬಹುದಾಗಿದ್ದು, ಟಿವಿಕೆ ಸರ್ಕಾರ ರಚನೆ ಮಾಡುವುದು ಬಹುತೇಕ ಖಚಿತವಾಗಿದೆ.


ಇನ್ನು ಟಿವಿಕೆ ಈ ಮಟ್ಟಿಗೆ ಗೆಲುವು ಸಾಧಿಸಲು ನಟ ವಿಜಯ್ ಸ್ಟಾರ್‌ಡಂ ಕಾರಣ ಎಂದು ಹೇಳಲಾಗುತ್ತಿದೆ. ಈ ಅಂಶ ಎಷ್ಟು ಸತ್ಯವೋ ಅಷ್ಟೇ ಸತ್ಯ ಟಿವಿಕೆ ತನ್ನ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ ಯೋಜನೆಗಳು.


ಟಿವಿಕೆ ತನ್ನ ಪ್ರಣಾಳಿಕೆಯಲ್ಲಿ ಮಹಿಳೆಯರು, ವಿದ್ಯಾರ್ಥಿಗಳು, ಆರೋಗ್ಯ, ರೈತರಿಗೆ ಹಲವಾರು ಉಚಿತ ಸೌಲಭ್ಯ ಒದಗಿಸುವುದಾಗಿ ಘೋಷಿಸಿದ್ದು, ಇದು ಸ್ಟಾರ್‌ಡಂ ಜತೆ ಸೇರಿ ವಿಜಯ್‌ಗೆ ಗೆಲುವನ್ನು ತಂದುಕೊಟ್ಟಿವೆ ಎಂದರೆ ತಪ್ಪಾಗಲಾರದು. ಇನ್ನು ಚುನಾವಣೆ ಬಳಿಕ ವಿಜಯ್ ಟಿವಿಕೆ ಪಕ್ಷದ ಪ್ರಣಾಳಿಕೆ ನೋಡಿದರೆ ಇಷ್ಟೆಲ್ಲ ಆಶ್ವಾಸನೆಗಳನ್ನು ನಿಜಕ್ಕೂ ದಳಪತಿ ನೆರವೇರಿಸುತ್ತಾರಾ ಎಂಬ ಪ್ರಶ್ನೆ ಮೂಡದೇ ಇರದು.

ಮಹಿಳೆಯರಿಗೆ ಸಾಲು ಸಾಲು ಉಚಿತ ಕೊಡುಗೆಗಳು:


* 60 ವರ್ಷದೊಳಗಿನ ಪ್ರತಿ ಕುಟುಂಬದ ಮುಖ್ಯಸ್ಥೆಗೆ ಪ್ರತಿ ತಿಂಗಳು 2500 ರೂಪಾಯಿ


* ಎಲ್ಲ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ


* ಎಲ್ಲ ಕುಟುಂಬಕ್ಕೂ ವರ್ಷಕ್ಕೆ 6 ಎಲ್‌ಪಿಜಿ ಸಿಲಿಂಡರ್‌ಗಳು ಉಚಿತ


* ಮದುವೆಯಾಗುವ ಯುವತಿಯರಿಗೆ 8 ಗ್ರಾಂ ಚಿನ್ನ ಹಾಗೂ ರೇಷ್ಮೆ ಸೀರೆ ಉಚಿತ


* ನವಜಾತ ಹೆಣ್ಣು ಶಿಶುವಿಗೆ ಉಚಿತ ಚಿನ್ನದ ಉಂಗುರ ಹಾಗೂ ವೆಲ್‌ಕಮ್ ಕಿಟ್


ಆರೋಗ್ಯಕ್ಕೇನು?


* ಪ್ರತಿ ಕುಟುಂಬಕ್ಕೂ 25 ಲಕ್ಷ ರೂ ಉಚಿತ ಆರೋಗ್ಯ ವಿಮೆ

* ವಿಶ್ವ ದರ್ಜೆಯ ಚಿಕಿತ್ಸೆ


* ಸರ್ಕಾರಿ ಯೋಜನೆಗಳನ್ನು ಯಾವುದೇ ಲಂಚ ನೀಡದೆ ಪಡೆದುಕೊಳ್ಳಲು ಸಿಟಿಜನ್ ಪ್ರಿವಿಲೇಜ್ ಕಾರ್ಡ್


ಶಿಕ್ಷಣಕ್ಕೆ


* ಸಣ್ಣ ರೈತರ ಮಕ್ಕಳಿಗೆ ಉಚಿತ ಉನ್ನತ ಶಿಕ್ಷಣ


* 12ರಿಂದ ಪಿಎಚ್‌ಡಿವರೆಗೆ ಬಡ್ಡಿ ಇಲ್ಲದ ಹಾಗೂ ಮೇಲಾಧಾರ ಶುಲ್ಕವಿಲ್ಲದ ಶಿಕ್ಷಣ ಸಾಲ ( 20 ಲಕ್ಷ ರೂವರೆಗೆ )


* 500 ಅತ್ಯುನ್ನತ ಗುಣಮಟ್ಟದ ವಸತಿ ಶಾಲೆಗಳು


ನಿರುದ್ಯೋಗಿಗಳಿಗೆ


* 29 ವರ್ಷ ದಾಟಿದ ಪದವೀಧರ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು 4000 ರೂ


* ಡಿಪ್ಲೋಮಾ ಓದಿದ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು 2000 – 2500 ರೂ

* ಪ್ರತಿ ವರ್ಷ 5 ಲಕ್ಷ ಇಂಟರ್ನ್‌ಶಿಪ್, ಪದವೀಧರರಿಗೆ 10 ಸಾವಿರ ಸ್ಟೈಫಂಡ್ ಹಾಗೂ ಐಟಿ ಪದವೀಧರರಿಗೆ 8 ಸಾವಿರ ಸ್ಟೈಫಂಡ್


* 75% ಉದ್ಯೋಗ ಸ್ಥಳೀಯರಿಗೆ: ಖಾಸಗಿ ಹಾಗೂ ಸರ್ಕಾರಿ ವಲಯಗಳಲ್ಲಿ ಸ್ಥಳೀಯರಿಗೆ ಉದ್ಯೋಗದ ಪ್ರಾಶಸ್ತ್ಯ


* 1.5 ಲಕ್ಷ ಕ್ರಿಯೇಟರ್‌ಗಳಿಗೆ ಕ್ರಿಯೇಟಿವ್ ಎಂಟರ್‌ಪ್ರೀನಿಯರ್ ಸ್ಕೀಮ್ ಸಪೋರ್ಟ್ ಹಾಗೂ ಸ್ಟಾರ್ಟ್‌ಅಪ್ ಸಪೋರ್ಟ್


* ಕೌಶಲ್ಯ ಅಭಿವೃದ್ಧಿ ಹಾಗೂ ಎಐ ಸಂಬಂಧಿತ ಉದ್ಯೋಗಾವಕಾಶಗಳು


* ಮೆರಿಟ್ ಆಧಾರದ ಮೇಲೆ ಲಂಚವಿಲ್ಲದ, ಪಾರದರ್ಶಕ ನೇಮಕಾತಿ, ವರ್ಗಾವಣೆ ಹಾಗೂ ಬಡ್ತಿ.


ರೈತರಿಗೆ:

* 5 ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ರೈತರ ಸಂಪೂರ್ಣ ಸಾಲ ಮನ್ನಾ


* 5 ಎಕರೆಗಿಂತ ಹೆಚ್ಚಿನ ಜಮೀನು ಹೊದಿರುವ ರೈತರ 50% ಸಾಲ ಮನ್ನಾ


* ಎಲ್ಲಾ ರೈತರಿಗೆ 100% ಬೆಳೆ ವಿಮೆ


* ಒಂದು ಟನ್ ಕಬ್ಬಿಗೆ ಕನಿಷ್ಟ 4500 ರೂ ಬೆಂಬಲ ಬೆಲೆ


* ಎಲ್ಲ ಮೀನುಗಾರರಿಗೆ ಮನೆ ನಿರ್ಮಾಣ



Comments

Popular posts from this blog

ದಾವಣಗೆರೆ ಕಾರ್ಗಿಲ್​ ಕಾರ್ಖಾನೆಯಲ್ಲಿ ಉತ್ಪಾದನೆ ಸ್ಥಗಿತ: ನ್ಯಾಯಕ್ಕಾಗಿ ಕಾರ್ಮಿಕರು ಹೋರಾಟ

ತಂದೆ-ತಾಯಿಯ 13 ವರ್ಷಗಳ ಕನಸು ನನಸು ಮಾಡಿದ ಮಗ: ಕಟ್ಟಿಗೆಹಳ್ಳಿಯಲ್ಲಿ ಅದ್ದೂರಿ ಗೃಹಪ್ರವೇಶ!

ಕೊಟ್ಟೂರು ತಾಲ್ಲೂಕಿನ ಕೋಗಲಿಯಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಣೆ