BIG NEWS: ಬರೀ ಹಿಜಾಬ್ ಅಂತ ಯಾಕೆ ಮಾತನಾಡ್ತೀರಾ? ನಿಮಗೆ ಯಾಕೆ ಜನಿವಾರ ಕಾಣಿಸಲಿಲ್ವಾ? ಶಿಕ್ಷಣ ಸಚಿವ ಮಧು ಬಂಗಾರಪ್ಪ ಗರಂ


 ಬೆಂಗಳೂರು: ಶಾಲಾ ಸಮವಸ್ತ್ರ ವಿಚಾರವಾಗಿ ರಾಜ್ಯ ಸರ್ಕಾರ ಹೊರಡಿಸಿರುವ ಹೊಸ ಆದೇಶ ರಾಜ್ಯದಲ್ಲಿ ಮತ್ತೆ ಹಿಜಾಬ್ ಹಾಗೂ ಕೇಸರಿ ಶಾಲು ಕದನ ಆರಂಭಕ್ಕೆ ಕಾರಣವಾಗಲಿದೆಯೇ? ಎಂಬ ಪ್ರಶ್ನೆ ಮೂಡಿದೆ. ಹೊಸ ಆದೇಶದಲ್ಲಿ ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಿರುವುದು ಹಿಂದೂ ಸಂಘಟನೆಗಳು ಹಾಗೂ ವಿಪಕ್ಷ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ. ಮುಸ್ಲಿಂ ಮತಗಳ ಓಲೈಕೆಗಾಗಿ ಕಾಂಗ್ರೆಸ್ ಸರ್ಕಾರ ಇಂತದ್ದೊಂದು ಆದೇಶ ಹೊರಡಿಸಿದೆ. ಈ ಮೂಲಕ ಶಾಲಾ ಮಕ್ಕಳಲ್ಲಿಯೂ ಧರ್ಮದ ವಿಷ ಬೀಜ ಬಿತ್ತಲು ಹೊರಟಿದೆ ಎಂದು ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ವಿಚಾರವಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.


ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಮಧು ಬಂಗಾರಪ್ಪ, ಹಿಜಾಬ್ ಅನುಮತಿ ಆದೇಶ ಮಕ್ಕಳ ಹಿತ ದೃಷ್ಟಿಯಿಂದ ಮಾಡಿದ್ದು‌, ಶಿಕ್ಷಣ, ಧರ್ಮಕ್ಕೆ ಕೈ ಹಾಕಲು ಹೋಗಬೇಡಿ ಎಂದರು.

ಬರೀ ಹಿಜಾಬ್ ಅಂತ ಯಾಕೆ ಮಾತನಾಡ್ತೀರಾ? ನಿಮಗೆ ಯಾಕೆ ಜನಿವಾರ ಕಾಣಿಸಲಿಲ್ವಾ? ಯಾಕೆ ಯಾವಾಗ್ಲೂ ಹಿಜಾಬ್ ಬಗ್ಗೆ ಕೇಳ್ತೀರಾ? ಯಾರೋ ಸರ್ಕಾರದ ಆದೇಶವನ್ನು ವಿರೋಧಿಸ್ತಾರೆ‌. ಅವರು ನೀಟ್ ಎಕ್ಸಾಂನಲ್ಲಿ ತೊಂದರೆ ಕೊಟ್ರು. ಅದು ನಿಮಗೆ ಕಾಣ್ತಿಲ್ವಾ? ಒಂದೂವರೆ ಲಕ್ಷ ಮಕ್ಕಳು ತೊಂದರೆಗೊಳಗಾದ್ರು. ಧರ್ಮೇಂದ್ರ ಪ್ರಧಾನ್ ದೇಶದ ಶಿಕ್ಷಣ ಸಚಿವರಲ್ವೇ?. ಅವರೇಕೆ ಕಾರಲ್ಲಿ ಹತ್ತಿ ಓಡಿಹೋದ್ರು. ರಾಜಸ್ಥಾನ್, ಗುಜರಾತಲ್ಲಿ ಸಿಕ್ಕಿಹಾಕಿಕೊಂಡವರು ಬಿಜೆಪಿಯವರಲ್ವೇ? ಅವರು ಕಳ್ಳರು ಅಲ್ವಾ ಹೇಳಿ? ಎಂದು ತಿರುಗೇಟು ನೀಡಿದರು.


ಆದೇಶ ವಿರೋಧಿಸೋರಿಗೆ ಒಂದೇ ಹೇಳೋದು. ನೀಟ್ನಿಂದ 25 ಲಕ್ಷ ಮಕ್ಕಳು ತೊಂದರೆಗೊಳಗಾದ್ರು. ಅವರ ಕಾಲ ಕೆಳಗೆ ಇವರು ನುಸುಳಲಿ. ಕೇಂದ್ರೀಯ ವಿವಿಯಲ್ಲೂ ನಾವು ಮಾಡಿದ ಆದೇಶವಿದೆ. ಮೋದಿಯವರೇ ಈ ಕಾನೂನು ಮಾಡಿದ್ದಾರೆ. ಮಹಾರಾಷ್ಟ್ರದಲ್ಲೂ ಇದೇ ಕಾನೂನಿದೆ. ಸಿಎಂ ಎಲ್ಲರನ್ನೂ ಪ್ರೀತಿ ವಿಶ್ವಾಸಕ್ಕೆ ತೆಗೆದುಕೊಳ್ಳಿ ಅಂದ್ರು. ಬಿಜೆಪಿಯವರಿಗೆ ಹೊಟ್ಟೆಕಿಚ್ಚು. ಎಸ್ಸಿ, ಎಸ್ಟಿಯವರು, ಒಬಿಸಿ, ಮೈನಾರಿಟಿಯವರು ಹೆಚ್ಚು ಪಾಸ್ ಆಗಿದ್ದಾರೆ. ಅದಕ್ಕೆ ಬಿಜೆಪಿಯವರಿಗೆ ಹೊಟ್ಟೆ ಕಿಚ್ಚು ಎಂದು ಕಿಡಿಕಾರಿದರು.

ನಾನು ಹೋರಾಟಗಾರರಿಗೂ ರಿಕ್ವೆಸ್ಟ್ ಮಾಡುತ್ತೇನೆ. ಮಕ್ಕಳ ವಿದ್ಯಾಭ್ಯಾಸಕ್ಕೆ ದ್ವೇಷ ಮಾಡಬೇಡಿ. ಅದನ್ನು ಮೋದಿ ವಿರುದ್ಧ ಅಂತಾನೆ ಅಂದುಕೊಳ್ಳಿ. ಹಿಂದಿನ ಸರ್ಕಾರದ ಆದೇಶವನ್ನು ವಿತ್ ಡ್ರಾ ಮಾಡುತ್ತೇವೆ. ಲೀಗಲ್ ಫೈಟ್ ಅನ್ನು ಕಾನೂನು ಇಲಾಖೆ ನೋಡುತ್ತದೆ ಎಂದರು.

Comments

Popular posts from this blog

ಚಾರ್ವಿಕ ಟೂರ್ಸ್ ಅಂಡ್ ಟ್ರಾವೆಲ್ಸ್‌ನಿಂದ ಪ್ರಥಮ ವರ್ಷದ ವಾರ್ಷಿಕೋತ್ಸವದ ಧಮಾಕಾ ಆಫರ್; ಕೇವಲ ₹2,100 ರಲ್ಲಿ 4 ವರ್ಷಗಳ ಸುದೀರ್ಘ ಪ್ರವಾಸ ಯೋಜನೆ!

ದಾವಣಗೆರೆ ಕಾರ್ಗಿಲ್​ ಕಾರ್ಖಾನೆಯಲ್ಲಿ ಉತ್ಪಾದನೆ ಸ್ಥಗಿತ: ನ್ಯಾಯಕ್ಕಾಗಿ ಕಾರ್ಮಿಕರು ಹೋರಾಟ

ತಂದೆ-ತಾಯಿಯ 13 ವರ್ಷಗಳ ಕನಸು ನನಸು ಮಾಡಿದ ಮಗ: ಕಟ್ಟಿಗೆಹಳ್ಳಿಯಲ್ಲಿ ಅದ್ದೂರಿ ಗೃಹಪ್ರವೇಶ!