ದಿಲೀಪ್ ರಾಜ್ ಸಾವಿಗೆ ಮುನ್ನ ನಡೆದಿದ್ದ ವಿಚಾರ ಬಯಲು


 ಬೆಂಗಳೂರು: ಕನ್ನಡ ಹಿರಿತೆರೆ ಮತ್ತು ಕಿರುತೆರೆ ನಟ, ನಿರ್ಮಾಪಕ ದಿಲೀಪ್ ರಾಜ್ ನಿಧನರಾಗಿದ್ದಾರೆ. ಅವರ ಹಠಾತ್ ಸಾವಿಗೆ ಮುನ್ನ ನಡೆದ ವಿಚಾರ ಈಗ ಬಯಲಾಗಿದೆ.

ನಟ, ನಿರ್ಮಾಪಕ, ಕಂಠದಾನ ಕಲಾವಿದನಾಗಿ ಗುರುತಿಸಿಕೊಂಡಿದ್ದ ದಿಲೀಪ್ ರಾಜ್ 47 ನೇ ವಯಸ್ಸಿಗೆ ಹೃದಯಾಘಾತವಾಗಿ ನಿಧನರಾಗಿದ್ದಾರೆ. ಅವರ ಸಾವು ಕುಟುಂಬದವರನ್ನು ಕಂಗೆಡಿಸಿದೆ. ಆರೋಗ್ಯವಾಗಿದ್ದ ದಿಲೀಪ್ ಗೆ ಸಾಯುವಂತದ್ದು ಏನಾಯ್ತು ಎಂದು ಎಲ್ಲರಿಗೂ ಶಾಕ್ ಉಂಟು ಮಾಡಿದೆ.


ನಿನ್ನೆ ರಾತ್ರಿ ಊಟ ಮಾಡಿದ್ದ ಮಲಗಿದ್ದ ದಿಲೀಪ್ ಇಂದು ಬೆಳಿಗ್ಗೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಅವರಿಗೆ ಕೊನೆಯ ಕ್ಷಣದಲ್ಲಿ ಏನಾಯ್ತು ಎಂದು ಪತ್ನಿಯ ತಂದೆ ರಿವೀಲ್ ಮಾಡಿದ್ದಾರೆ. ‘ರಾತ್ರಿ ಊಟ ಮಾಡಿ ಕ್ಲೀನ್ ಆಗಿ ಮಲಗಿದ್ದ. ಬೆಳಿಗ್ಗೆ ಸುಮಾರು 5.30 ಗೆ ತುಂಬಾ ಎದೆ ನೋವು ಬಂದಿದೆ. ಏನೋ ಗರ ಗರ ಸೌಂಡ್ ಬಂತು ಎಂದು ನನ್ನ ಮಗಳು ತಕ್ಷಣವೇ ಎದ್ದು ಬಾಯಿಗೆ ಉಸಿರು ನೀಡಿ ಪ್ರಥಮ ಚಿಕಿತ್ಸೆ ಕೊಡುವ ಪ್ರಯತ್ನ ಮಾಡಿದ್ದಾಳೆ. ಆದರೆ ಪ್ರಯೋಜನವಾಗಿಲ್ಲ ಎಂದಿದ್ದಾರೆ.

ಇನ್ನು, ಇಂದು ಬೆಳಿಗ್ಗೆ ವರ್ಷಂಪ್ರತಿ ಮಾಡುವಂತೆ 8 ಗಂಟೆಗೆ ಹೆಲ್ತ್ ಚೆಕಪ್ ಗೆ ಅಪಾಯಿಂಟ್ ಮೆಂಟ್ ಕೂಡಾ ಪಡೆದುಕೊಂಡಡಿದ್ದರಂತೆ. ಆದರೆ ಅಷ್ಟರಲ್ಲಿ ಹೀಗಾಗಿದೆ ಎಂದು ತಿಳಿದುಬಂದಿದೆ.

Comments

Popular posts from this blog

ಚಾರ್ವಿಕ ಟೂರ್ಸ್ ಅಂಡ್ ಟ್ರಾವೆಲ್ಸ್‌ನಿಂದ ಪ್ರಥಮ ವರ್ಷದ ವಾರ್ಷಿಕೋತ್ಸವದ ಧಮಾಕಾ ಆಫರ್; ಕೇವಲ ₹2,100 ರಲ್ಲಿ 4 ವರ್ಷಗಳ ಸುದೀರ್ಘ ಪ್ರವಾಸ ಯೋಜನೆ!

ದಾವಣಗೆರೆ ಕಾರ್ಗಿಲ್​ ಕಾರ್ಖಾನೆಯಲ್ಲಿ ಉತ್ಪಾದನೆ ಸ್ಥಗಿತ: ನ್ಯಾಯಕ್ಕಾಗಿ ಕಾರ್ಮಿಕರು ಹೋರಾಟ

ತಂದೆ-ತಾಯಿಯ 13 ವರ್ಷಗಳ ಕನಸು ನನಸು ಮಾಡಿದ ಮಗ: ಕಟ್ಟಿಗೆಹಳ್ಳಿಯಲ್ಲಿ ಅದ್ದೂರಿ ಗೃಹಪ್ರವೇಶ!