ಕೊಟ್ಟೂರು ಜೆಸ್ಕಾಂ AE ಚೇತನ್ ದರ್ಪ: ಗೃಹಜ್ಯೋತಿ ಗ್ರಾಹಕರಿಗೆ ಬಿಲ್ ಶಾಕ್ - ಪ್ರಶ್ನಿಸಿದರೆ ಅಧಿಕಾರಿಯಿಂದ ಉಡಾಫೆ ಉತ್ತರ!
ಕೊಟ್ಟೂರು ಜೆಸ್ಕಾಂ AE ಚೇತನ್ ದರ್ಪ: ಗೃಹಜ್ಯೋತಿ ಗ್ರಾಹಕರಿಗೆ ಬಿಲ್ ಶಾಕ್ - ಪ್ರಶ್ನಿಸಿದರೆ ಅಧಿಕಾರಿಯಿಂದ ಉಡಾಫೆ ಉತ್ತರ!
ಕೊಟ್ಟೂರು: ಕೊಟ್ಟೂರು ತಾಲೂಕಿನ ಜೆಸ್ಕಾಂ (GESCOM) ಇಲಾಖೆಯ ಸಾಫ್ಟ್‌ವೇರ್ ಎಡವಟ್ಟು ಹಾಗೂ ಅಧಿಕಾರಿಗಳ ಬೇಜವಾಬ್ದಾರಿಯಿಂದ ಸಾರ್ವಜನಿಕರು ತೀವ್ರ ಆಕ್ರೋಶಗೊಂಡಿದ್ದಾರೆ. ಸರ್ಕಾರದ ಗೃಹಜ್ಯೋತಿ ಸಬ್ಸಿಡಿ ಕಡಿತ ಮಾಡದೆಯೇ ಮನೆ ಮನೆಗೆ ಸಾವಿರಾರು ರೂಪಾಯಿಗಳ ತಪ್ಪು ಬಿಲ್ ವಿತರಿಸಿ ಜನರಿಗೆ ಮೋಸ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
AE ಚೇತನ್ ವಿರುದ್ಧ ಸಾರ್ವಜನಿಕರ ಆಕ್ರೋಶ!
ಈ ಗೊಂದಲದ ಬಗ್ಗೆ ಸ್ಪಷ್ಟನೆ ಕೇಳಲು ಗ್ರಾಹಕರು ಹೋದರೆ, ಸ್ಥಳೀಯ AE ಚೇತನ್ ಅವರು ಸಾರ್ವಜನಿಕರಿಗೆ ಸರಿಯಾಗಿ ಸ್ಪಂದಿಸದೆ ದರ್ಪ ತೋರುತ್ತಿದ್ದಾರೆ ಎಂಬ ದೂರುಗಳು ವ್ಯಾಪಕವಾಗಿ ಕೇಳಿಬರುತ್ತಿವೆ. ಬಿಲ್‌ನಲ್ಲಿರುವ ದೋಷದ ಬಗ್ಗೆ ಕೇಳಿದರೆ ಗ್ರಾಹಕರಿಗೆ ಸೌಜನ್ಯದಿಂದ ಉತ್ತರಿಸುವ ಬದಲು, ಅಹಂಕಾರದಿಂದ ನಡೆದುಕೊಳ್ಳುತ್ತಿದ್ದಾರೆ. ಪ್ರಶ್ನೆ ಕೇಳುತ್ತಿದ್ದಂತೆಯೇ ಸರಿಯಾಗಿ ರೆಸ್ಪಾನ್ಸ್ ಮಾಡದೆ ಬೈಕ್ ಏರಿ ಹೊರಟು ಹೋಗುವ ಚೇತನ್ ಅವರ ನಡವಳಿಕೆಗೆ ಕೊಟ್ಟೂರು ಜನತೆ ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಕೊಟ್ಟೂರಿನ ಗ್ರಾಹಕರಿಗೆ ವಿತರಿಸಲಾದ ಬಿಲ್‌ಗಳಲ್ಲಿ ಸಬ್ಸಿಡಿ ಮೊತ್ತವನ್ನು ಕಳೆಯದೆಯೇ ಪೂರ್ಣ ಮೊತ್ತವನ್ನು (ಉದಾಹರಣೆಗೆ ₹1199) ಪಾವತಿಸಬೇಕೆಂದು ತೋರಿಸಲಾಗುತ್ತಿದೆ. ಆದರೆ ಆನ್‌ಲೈನ್‌ನಲ್ಲಿ ಪರಿಶೀಲಿಸಿದಾಗ ಸಬ್ಸಿಡಿ ಕಡಿತವಾಗಿ ಕೇವಲ ₹369 ತೋರಿಸುತ್ತಿದೆ. ಸಾಫ್ಟ್‌ವೇರ್‌ನಲ್ಲಿ ದೋಷವಿದ್ದರೆ ಬಿಲ್ ವಿತರಣೆ ಯಾಕೆ ನಿಲ್ಲಿಸಲಿಲ್ಲ? ಬಡವರಿಂದ ಮತ್ತು ಅನಕ್ಷರಸ್ಥರಿಂದ ಹೆಚ್ಚುವರಿ ಹಣ ವಸೂಲಿ ಮಾಡಲು ಜೆಸ್ಕಾಂ ಇಲಾಖೆ ಇಂತಹ ಸಂಚು ರೂಪಿಸಿದೆಯೇ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ
ಆಟೋ ಪೇ ಗ್ರಾಹಕರು ಹುಷಾರ್!
ಫೋನ್-ಪೇ ಅಥವಾ ಇತರ ಆ್ಯಪ್‌ಗಳಲ್ಲಿ ಆಟೋ-ಪೇ ಇಟ್ಟುಕೊಂಡಿರುವ ಗ್ರಾಹಕರ ಖಾತೆಯಿಂದ ತಪ್ಪು ಮೊತ್ತವೇ ಕಟ್ ಆಗುವ ಸಾಧ್ಯತೆ ಇದೆ. ಕೊಟ್ಟೂರಿನ ಜನತೆ ಬಿಲ್ ಪಾವತಿಸುವ ಮೊದಲು ಆನ್‌ಲೈನ್‌ನಲ್ಲಿ ಮೊತ್ತವನ್ನು ಸರಿಯಾಗಿ ಪರಿಶೀಲಿಸಬೇಕೆಂದು ಮನವಿ ಮಾಡಲಾಗಿದೆ.
AE ಚೇತನ್ ಅವರ ಈ ಬೇಜವಾಬ್ದಾರಿತನ ಮತ್ತು ಜೆಸ್ಕಾಂ ಐಟಿ ವಿಭಾಗದ ವೈಫಲ್ಯದ ಬಗ್ಗೆ ಉನ್ನತ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.



Comments
Post a Comment