ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಪತಿಯ ಕೊಲೆಗೆ ಕಾರಣವಾದ ಆರೋಪಿಗೆ ಗಲ್ಲು ಶಿಕ್ಷೆ; ಅಪರೂಪದ ಪ್ರಕರಣ ಎಂದು ಘೋಷಿಸಿದ ಕೋರ್ಟ್‌…!


 ಶಿವಮೊಗ್ಗ: ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಪತ್ನಿ ಹಾಗೂ ಆಕೆಯ ಪ್ರಿಯಕರ ಸೇರಿ ಕೊಲೆ ಮಾಡಿದ್ದ ಪ್ರಕರಣ ಸಂಬಂಧ ಆರೋಪಿಗಳಿಗೆ ನ್ಯಾಯಾಲಯವು ಗಲ್ಲು ಶಿಕ್ಷೆ ವಿಧಿಸಿದೆ.

ಈ ಘಟನೆ ಶಿವಮೊಗ್ಗದಲ್ಲಿ ನಡೆದಿದ್ದು, ಪ್ರಕಾಶ್ ಮೃತ ದುರ್ದೈವಿ. ಇವರ ಪತ್ನಿ ಫ್ಲೋರಾಳಿಗೆ ರಾಜಶೇಖರಯ್ಯ ಎಂಬಾತನೊಂದಿಗೆ ಅಕ್ರಮ ಸಂಬಂಧವಿತ್ತು. ಇವರ ಕಳ್ಳ ಸಂಬಂಧಕ್ಕೆ ಪತಿ ಅಡ್ಡಿಯಾಗುತ್ತಾನೆಂದು ಈ ಇಬ್ಬರೂ 2020ರ ಜನವರಿ 15 ರಂದು ಪ್ರಕಾಶ್ ಗೆ ಮೊದಲು ಮತ್ತು ಬರುವ ಔಷಧಿ ನೀಡಿದ್ದರು. ಬಳಿಕ ಪ್ರಜ್ಞೆ ತಪ್ಪುತ್ತಿದ್ದಂತೆಯೇ ಅವರನ್ನು ಉಸಿರುಗಟ್ಟಿಸಿ ಅಮಾನುಷವಾಗಿ ಕೊಲೆ ಮಾಡಿದ್ದರು.

ಇನ್ನು ನ್ಯಾಯಾಲಯವು ಈ ಕೃತ್ಯವು ‘ಅಪರೂಪದ ಪ್ರಕರಣ’ ವೆಂದು ಪರಿಗಣಿಸಿ ಇಬ್ಬರಿಗೂ ಗಲ್ಲು ಶಿಕ್ಷೆಯ ಜೊತೆಗೆ 14 ಲಕ್ಷ ದಂಡ ವಿಧಿಸಿದೆ. ಮೃತ ಪ್ರಕಾಶ್‌ ಕುಟುಂಬಸ್ಥರಿಗೆ 5 ಲಕ್ಷ ಪರಿಹಾರ ನೀಡುವಂತೆ ನ್ಯಾಯಾಲಯ ಸೂಚಿಸಿದೆ.

Comments

Popular posts from this blog

ದಾವಣಗೆರೆ ಕಾರ್ಗಿಲ್​ ಕಾರ್ಖಾನೆಯಲ್ಲಿ ಉತ್ಪಾದನೆ ಸ್ಥಗಿತ: ನ್ಯಾಯಕ್ಕಾಗಿ ಕಾರ್ಮಿಕರು ಹೋರಾಟ

ತಂದೆ-ತಾಯಿಯ 13 ವರ್ಷಗಳ ಕನಸು ನನಸು ಮಾಡಿದ ಮಗ: ಕಟ್ಟಿಗೆಹಳ್ಳಿಯಲ್ಲಿ ಅದ್ದೂರಿ ಗೃಹಪ್ರವೇಶ!

ಕೊಟ್ಟೂರು ತಾಲ್ಲೂಕಿನ ಕೋಗಲಿಯಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಣೆ