ರಾಯಚೂರು: ಜಮೀನಿನ ಖಾತೆ ನೀಡಲು 1.5 ಲಕ್ಷ ರೂ. ಲಂಚ ಪಡೆದಿದ್ದ ಬಿಜನಗೇರಾ ಪಿಡಿಒ ಲಕ್ಷ್ಮೀ ಲೋಕಾಯುಕ್ತ ಬಲೆಗೆ!


 ಜಮೀನಿನ ಖಾತಾ ಉತಾರ ನೀಡಲು ವ್ಯಕ್ತಿಯೊಬ್ಬರಿಂದ 1.5 ಲಕ್ಷ ಲಂಚ ಪಡೆದಿದ್ದ ಬಿಜನಗೇರಾ ಗ್ರಾಮದ ಪಿಡಿಒ ಲಕ್ಷ್ಮೀ ಪ್ಯಾಟಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ರಾಯಚೂರು: ಜಮೀನಿನ ಖಾತಾ ಉತಾರ ನೀಡಲು ವ್ಯಕ್ತಿಯೊಬ್ಬರಿಂದ 1.5 ಲಕ್ಷ ಲಂಚ ಪಡೆದಿದ್ದ ಬಿಜನಗೇರಾ ಗ್ರಾಮದ ಪಿಡಿಒ ಲಕ್ಷ್ಮೀ ಪ್ಯಾಟಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಲೇಔಟ್ ನಿರ್ಮಾಣಕ್ಕಾಗಿ ಎರಡು ಎಕರೆ ಜಮೀನಿನ ಖಾತಾ ಉತಾರಕ್ಕಾಗಿ ಬಿಜನಗೇರಾದ ಮೆಹಬೂಬ್ ಅಲಿ ಎಂಬುವರು ಮನವಿ ಮಾಡಿದ್ದರು. ಉತಾರ ಕೊಡಲು ಪಿಡಿಒ ಅವರು 2 ಲಕ್ಷ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಮೆಹಬೂಬ್ ಅಲಿ ಲೋಕಾಯುಕ್ತರಿಗೆ ದೂರು ನೀಡಿದ್ದರು. ಇಂದು ಲಕ್ಷ್ಮೀ ಪ್ಯಾಟಿ ತನ್ನ ಪತಿ ಖಾತೆಗೆ ಫೋನ್ ಪೇ ಮೂಲಕ 1.50 ಲಕ್ಷ ರೂಪಾಯಿ ವರ್ಗಾವಣೆ ಮಾಡಿಸಿಕೊಂಡ ಬೆನ್ನಲ್ಲೇ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಲಕ್ಷ್ಮೀಯನ್ನು ವಶಕ್ಕೆ ತೆಗೆದುಕೊಂಡರು.

Comments

Popular posts from this blog

ಚಾರ್ವಿಕ ಟೂರ್ಸ್ ಅಂಡ್ ಟ್ರಾವೆಲ್ಸ್‌ನಿಂದ ಪ್ರಥಮ ವರ್ಷದ ವಾರ್ಷಿಕೋತ್ಸವದ ಧಮಾಕಾ ಆಫರ್; ಕೇವಲ ₹2,100 ರಲ್ಲಿ 4 ವರ್ಷಗಳ ಸುದೀರ್ಘ ಪ್ರವಾಸ ಯೋಜನೆ!

ದಾವಣಗೆರೆ ಕಾರ್ಗಿಲ್​ ಕಾರ್ಖಾನೆಯಲ್ಲಿ ಉತ್ಪಾದನೆ ಸ್ಥಗಿತ: ನ್ಯಾಯಕ್ಕಾಗಿ ಕಾರ್ಮಿಕರು ಹೋರಾಟ

ತಂದೆ-ತಾಯಿಯ 13 ವರ್ಷಗಳ ಕನಸು ನನಸು ಮಾಡಿದ ಮಗ: ಕಟ್ಟಿಗೆಹಳ್ಳಿಯಲ್ಲಿ ಅದ್ದೂರಿ ಗೃಹಪ್ರವೇಶ!