Posts

Showing posts from November, 2026

ಹೊಟ್ಟೆಪಾಡಿಗಾಗಿ ಮತ್ತೆ ಬುಟ್ಟಿ ಹೆಣೆಯಲು ಮುಂದಾದ ಪದ್ಮಶ್ರೀ ಪುರಸ್ಕೃತೆ ಮಂಜಮ್ಮ ಜೋಗತಿ

Image
 ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಮರಿಯಮ್ಮನಹಳ್ಳಿ ಪಟ್ಟಣದಲ್ಲಿ ನೆಲೆಸಿರುವ ಮಂಜಮ್ಮ ಜೋಗತಿ ಅವರು, ಸದ್ಯ ಬದುಕು ಸಾಗಿಸಲು ನಿತ್ಯ ಶ್ರಮಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದು ಬುಟ್ಟಿಯನ್ನು ಹೆಣೆಯಲು ಅವರು ಬರೋಬ್ಬರಿ ಒಂದು ದಿನದ ಶ್ರಮವನ್ನು ಹಾಕುತ್ತಿದ್ದಾರೆ. ಸುಮಾರು 300 ರೂಪಾಯಿ ವೆಚ್ಚದಲ್ಲಿ ಸಿದ್ಧವಾಗುವ ಬುಟ್ಟಿಗಳನ್ನು(Basket Weaving ) 400 ರಿಂದ 500 ರೂಪಾಯಿಗೆ ಮಾರಾಟ ಮಾಡುವ ಮೂಲಕ ಅಲ್ಪ ಆದಾಯ ಕಂಡುಕೊಳ್ಳುತ್ತಿದ್ದಾರೆ. ಪದ್ಮಶ್ರೀ ಪ್ರಶಸ್ತಿ ಬಂದ ಹೊಸತರಲ್ಲಿ ಹಲವು ಸಂಘ-ಸಂಸ್ಥೆಗಳು ಮಂಜಮ್ಮ ಜೋಗತಿ ಅವರನ್ನು ವಿವಿಧ ಕಾರ್ಯಕ್ರಮಗಳಿಗೆ ಆಹ್ವಾನಿಸಿ, ಗೌರವ ಸಂಭಾವನೆ ನೀಡಿ ಸನ್ಮಾನಿಸುತ್ತಿದ್ದವು. ಆದರೆ, ದಿನಕಳೆದಂತೆ ಕಾರ್ಯಕ್ರಮಗಳ ಆಹ್ವಾನವೂ ಕಡಿಮೆಯಾಗಿದ್ದು, ಗೌರವ ಸಂಭಾವನೆಯೂ ಇಲ್ಲದಂತಾಗಿದೆ. ಇದರ ಜೊತೆಗೆ ಸರ್ಕಾರದಿಂದ ಬರುವ ಮಾಶಾಸನವೂ ಸಮರ್ಪಕವಾಗಿ ಕೈಸೇರದ ಕಾರಣ, ದೈನಂದಿನ ಜೀವನ ನಿರ್ವಹಣೆಗೆ ತೀವ್ರ ಪರದಾಡುವಂತಾಗಿದೆ. ಯಾರ ಮುಂದೆಯೂ ಕೈಚಾಚದೆ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ನಿರ್ಧರಿಸಿರುವ ಹಿರಿಯ ಕಲಾವಿದೆ, ತಮ್ಮ ಕೈಕಸುಬನ್ನೇ ನಂಬಿ ಬುಟ್ಟಿ ಹೆಣೆಯುತ್ತಿದ್ದಾರೆ.

ಜಾಮಾ ಮಸೀದಿ ಠಾಣೆಯಲ್ಲಿ ಪೊಲೀಸರ ಮೇಲೆ ಚಾಕುವಿನಿಂದ ಹಲ್ಲೆ; ಆರೋಪಿ ಎನ್‌ಕೌಂಟರ್!

Image
ನವದೆಹಲಿ: ಸೋಮವಾರ ಮಧ್ಯಾಹ್ನ ಹಳೆಯ ದೆಹಲಿಯ ಜಾಮಾ ಮಸೀದಿ ಪೊಲೀಸ್ ಠಾಣೆಯಲ್ಲಿ ನಡೆದ ಕೌಟುಂಬಿಕ ಕಲಹಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಕರೆಸಲಾಗಿದ್ದ ವ್ಯಕ್ತಿಯೊಬ್ಬ ಪೊಲೀಸರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದು ಐವರು ಗಾಯಗೊಂಡಿದ್ದರು. ನಂತರ ಪೊಲೀಸರು ಎನ್‌ಕೌಂಟರ್ ನಂತರ ಆತನನ್ನು ಬಂಧಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದಾಳಿಯ ನಂತರ ಠಾಣೆಯಿಂದ ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸಲು ಪೊಲೀಸ್ ತಂಡವೊಂದು ಜನದಟ್ಟಣೆಯ ಹವೇಲಿ ಅಜಮ್ ಖಾನ್ ಬೀದಿಗೆ ತಲುಪಿತ್ತು. ಆತ ಮತ್ತೆ ತಂಡದ ಮೇಲೆ ದಾಳಿ ಮಾಡಿದ್ದರಿಂದ ಪೊಲೀಸರು ಆರೋಪಿಯ ಮೇಲೆ ಗುಂಡು ಹಾರಿಸಿದ್ದು ಆತ ಗಾಯಗೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮಧ್ಯ ದೆಹಲಿ ಉಪ ಪೊಲೀಸ್ ಆಯುಕ್ತ (ಡಿಸಿಪಿ) ರೋಹಿತ್ ರಾಜ್‌ಬೀರ್ ಸಿಂಗ್ ಅವರು, ತನ್ನ ತಾಯಿ ಮತ್ತು ಸಹೋದರಿ ನಡುವಿನ ಕೌಟುಂಬಿಕ ಕಲಹಕ್ಕೆ ಸಂಬಂಧಿಸಿದಂತೆ ನಬೀಲ್ ಎಂಬಾತನನ್ನು ಜಾಮಾ ಮಸೀದಿ ಪೊಲೀಸ್ ಠಾಣೆಗೆ ಮಧ್ಯಾಹ್ನ 2:30ರ ಸುಮಾರಿಗೆ ಕರೆಸಿದ್ದರು. ಈ ಸಮಯದಲ್ಲಿ, ಅವರು ಇದ್ದಕ್ಕಿದ್ದಂತೆ ಪೊಲೀಸರ ಮೇಲೆ ಚಾಕುವಿನಿಂದ ದಾಳಿ ಮಾಡಿ, ಅವರಲ್ಲಿ ಐದು ಜನರ ಕುತ್ತಿಗೆ ಮತ್ತು ಮುಖದ ಮೇಲೆ ಗಾಯಗೊಳಿಸಿದರು ಎಂದು ಅವರು ಹೇಳಿದರು. ಗಾಯಾಳುಗಳನ್ನು ಮೊದಲು ಸಂಜೀವನ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಸರ್ ಗಂಗಾ ರಾಮ್ ಆಸ್ಪತ್ರೆಗೆ ಸೇರಿಸಲಾಯಿತು ಎಂದು ಅಧಿಕಾರಿ ಹೇಳಿದರು. ...

ಕಾಂಗ್ರೆಸ್ ಗೆದ್ದಿದೆ, ಕರೆಂಟ್ ಬಿಲ್ ಯಾರು ಕಟ್ಟುತ್ತಾರೆ?'; ಚುನಾವಣೆಯಲ್ಲಿ ಸೋತಿದ್ದಕ್ಕೆ ಗ್ರಾಮದಲ್ಲಿ ಅಳವಡಿಸಿದ್ದ 50 ಬೀದಿ ದೀಪಗಳನ್ನು ತೆರವುಗೊಳಿಸಿದ ಬಿಜೆಪಿ ಅಭ್ಯರ್ಥಿ.

Image
 ಭಿಲ್ವಾರಾ: ರಾಜಸ್ಥಾನದ ಗ್ರಾಮವೊಂದರಲ್ಲಿ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ಚುನಾವಣೆಯಲ್ಲಿ ಸೋತ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿಯೊಬ್ಬರು ದೀಪಾವಳಿಗೆ ಹಾಕಿಸಿದ್ದ ಸುಮಾರು 50 ಬೀದಿ ದೀಪಗಳನ್ನು ತೆರವುಗೊಳಿಸಿದ್ದಾರೆ. ಈ ಘಟನೆ ಟೋಂಕ್ ಜಿಲ್ಲೆಯ ಪಿಪ್ಲು ಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿದೆ. ಪಿಪ್ಲು ಪಂಚಾಯತ್ ಸಮಿತಿಯ ವಾರ್ಡ್ ನಂ. 2ರಲ್ಲಿ ಬಿಜೆಪಿ ಅಭ್ಯರ್ಥಿ ಪ್ರಿಯಾಂಕಾ ಶರ್ಮಾ ಅವರು ಕಾಂಗ್ರೆಸ್ ಪ್ರತಿಸ್ಪರ್ಧಿ ಧನ್ನಾ ಲಾಲ್ ವಿರುದ್ಧ 751 ಮತಗಳ ಅಂತರದಿಂದ ಸೋಲುಂಡ ಕೆಲವೇ ಗಂಟೆಗಳಲ್ಲಿ, ಅಂದರೆ ಶುಕ್ರವಾರ ಸಂಜೆ ದೀಪಾವಳಿಗೂ ಮುನ್ನ ಅಳವಡಿಸಲಾಗಿದ್ದ ಸುಮಾರು 50 ರಸ್ತೆ ದೀಪಗಳನ್ನು ತೆಗೆದುಹಾಕುವಂತೆ ಮಾಡಿದ್ದಾರೆ. ಪ್ರಿಯಾಂಕಾ ಶರ್ಮಾ ಅವರು ನಿವಾಯಿ ಕ್ಷೇತ್ರದ ಬಿಜೆಪಿ ಶಾಸಕ ರಾಮ ಸಹಾಯ್ ವರ್ಮಾ ಅವರ ಆಪ್ತ ಸಹಾಯಕ ಅಲೋಕ್ ಶರ್ಮಾ ಅವರ ಪತ್ನಿಯಾಗಿದ್ದಾರೆ. ಕಾಂಗ್ರೆಸ್ಗೆ ಗೆಲುವು ಪ್ರಿಯಾಂಕಾ ಅವರು ಚುನಾವಣಾ ಕಣದಲ್ಲಿದ್ದಾಗ, ಹಬ್ಬಕ್ಕೂ ಮುನ್ನ ಈ ದೀಪಗಳನ್ನು ಅಳವಡಿಸಿದ್ದರು. ಆದರೆ, ಈಗ ಸೋತಿದ್ದಾರೆ ಎನ್ನುವ ಒಂದೇ ಕಾರಣಕ್ಕೆ ದೀಪಗಳನ್ನು ತೆರವುಗೊಳಿಸಿದ್ದಾರೆ. ವೋಟ್ ಚಾರ್ ದಿನ್ ಕಿ ಚಾಂದನಿ, ಫಿರ್ ಅಂಧೇರಿ ರಾತ್ ಎಂದು ವಾರ್ಡ್ ಪಂಚ್ ಕಾಜೋಡ್ ಪ್ರಜಾಪತ್ ಕಿಡಿಕಾರಿದರು. ಈ ವಿಷಯದ ಬಗ್ಗೆ ಮಾತನಾಡಿದ ಬಿಜೆಪಿ ಶಾಸಕ ರಾಮಸಹಾಯ್ ವರ್ಮಾ, ಬೀದಿ ದೀಪ ಅಕ್ರಮವಾಗಿ ಅಳವಡಿಕೆ ಮಾಡಲಾಗಿತ್ತು. ಚುನಾವಣೆಗೂ ಮುನ್ನ ಗ್ರಾಮಸ್ಥ...

ಮಂಗಳೂರು ವಿದ್ಯಾರ್ಥಿನಿ ಕಿಡ್ನಾಪ್ ಕೇಸ್‌ಗೆ ಟ್ವಿಸ್ಟ್: ಕೇರಳಂನಲ್ಲಿ ಪತ್ತೆಯಾದ ಯುವತಿಯಿಂದ ಪೊಲೀಸರ ಮುಂದೆ ಸ್ಫೋಟಕ ಹೇಳಿಕೆ!

Image
 ಮಂಗಳೂರಿನ ದೇರಳಕಟ್ಟೆಯ ಕಣಚೂರು ವೈದ್ಯಕೀಯ ಕಾಲೇಜು ಆವರಣದಿಂದ ಅಪಹರಣಕ್ಕೊಳಗಾಗಿದ್ದ ವೈದ್ಯಕೀಯ ವಿದ್ಯಾರ್ಥಿನಿಯನ್ನು ಪೊಲೀಸರು ಕೇರಳಂನ ಸಂಬಂಧಿಕರ ಮನೆಯಲ್ಲಿ ಪತ್ತೆ ಹಚ್ಚಿ ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ: ಮಂಗಳೂರು: ಮಂಗಳೂರಿನ ಖಾಸಗಿ ಮೆಡಿಕಲ್ ಕಾಲೇಜು ಆವರಣದಿಂದ ವೈದ್ಯಕೀಯ ವಿದ್ಯಾರ್ಥಿನಿಯನ್ನು ಥಾರ್ ವಾಹನದಲ್ಲಿ ಬಲವಂತವಾಗಿ ಕರೆದೊಯ್ದಿದ್ದ ಪ್ರಕರಣ ಇದೀಗ ತೀವ್ರ ತಿರುವು ಪಡೆದುಕೊಂಡಿದೆ. ಕೋಣಾಜೆ ಪೊಲೀಸರು ಕೇರಳಂನಲ್ಲಿ ವಿದ್ಯಾರ್ಥಿನಿಯನ್ನು ಪತ್ತೆಹಚ್ಚಿ ಹೇಳಿಕೆ ಪಡೆದಿದ್ದು, ಮನೆಯವರ ಜೊತೆ ಹೋಗಲು ತನಗೆ ಇಷ್ಟವಿಲ್ಲ ಎಂದು ಯುವತಿ ಸ್ಪಷ್ಟಪಡಿಸಿದ್ದಾಳೆ. ಆ ಕುರಿತ ವರದಿ ಇಲ್ಲಿದೆ: ಏನಿದು ಪ್ರಕರಣ? ಗುರುವಾರ (ನವೆಂಬರ್ 19) ಸಂಜೆ ಅಪಹರಣಕ್ಕೊಳಗಾಗಿದ್ದ ಯುವತಿ ದಕ್ಷಿಣ ಕನ್ನಡ ಜಿಲ್ಲೆಯ ಪುಂಜಾಲಕಟ್ಟೆ ಮೂಲದವರಾಗಿದ್ದು, ಮಂಗಳೂರಿನ ದೇರಳಕಟ್ಟೆಯ ಕಣಚೂರು ವೈದ್ಯಕೀಯ ಕಾಲೇಜಿನಲ್ಲಿ ಪ್ರಥಮ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದಾರೆ. ಈಕೆ ಮಂಗಳೂರಿನ ಮತ್ತೊಂದು ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಡಿಎಸ್ ಓದುತ್ತಿರುವ ಅನ್ಯಕೋಮಿನ (ಹಿಂದೂ) ಯುವಕನನ್ನು ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಈ ವಿಚಾರ ತಿಳಿದ ಯುವತಿಯ ಪೋಷಕರು ಮತ್ತು ಸಂಬಂಧಿಕರು ಕಾಲೇಜು ಆವರಣಕ್ಕೆ ಬಂದು, ಆಕೆಯ ಇಚ್ಛೆಗೆ ವಿರುದ್ಧವಾಗಿ ಬಲವಂತವಾಗಿ ಎಳೆದೊಯ್ದು ಮಹೀಂದ್ರಾ ಥಾರ್ ವಾಹನದಲ್ಲಿ ಕೂರಿಸಿಕೊಂಡು ಹೋಗಿದ್ದರು. ಈ ದೃಶ್...

ದಾವಣಗೆರೆ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ-2026ಕ್ಕೆ ಅದ್ದೂರಿ ಚಾಲನೆ

Image
 ದಾವಣಗೆರೆ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ-2026ಕ್ಕೆ ಅದ್ದೂರಿ ಚಾಲನೆ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ 3 ದಿನಗಳ ಕ್ರೀಡಾ ಹಬ್ಬ; ಉದ್ಘಾಟನೆ ನೆರವೇರಿಸಿದ ಶ್ರೀ ನಾಗರಾಜ್ ರಾವ್ ಎನ್.ಎಸ್. ಪ್ರತಿ ವರ್ಷದಂತೆ ಈ ಬಾರಿಯೂ ದಾವಣಗೆರೆ ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ಆಯೋಜಿಸಲಾಗಿರುವ ಮೂರು ದಿನಗಳ "ದಾವಣಗೆರೆ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ-2026"ಕ್ಕೆ ಶುಕ್ರವಾರ ಬೆಳಿಗ್ಗೆ ಅದ್ದೂರಿ ಚಾಲನೆ ನೀಡಲಾಯಿತು. ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ನಡೆದ ವರ್ಣರಂಜಿತ ಉದ್ಘಾಟನಾ ಸಮಾರಂಭದಲ್ಲಿ ಶ್ರೀ ನಾಗರಾಜ್ ರಾವ್ ಎನ್.ಎಸ್. ಅವರು ಕ್ರೀಡಾಕೂಟವನ್ನು ಅಧಿಕೃತವಾಗಿ ಉದ್ಘಾಟಿಸಿದರು. ಸದಾ ಕರ್ತವ್ಯದ ಒತ್ತಡದಲ್ಲಿರುವ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ದೈಹಿಕ ಹಾಗೂ ಮಾನಸಿಕ ಉಲ್ಲಾಸ ನೀಡುವ ನಿಟ್ಟಿನಲ್ಲಿ ಈ ವಾರ್ಷಿಕ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ದಾವಣಗೆರೆ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ಶೇಖರ್ ಹೆಚ್.ಟಿ. (IPS), ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಪರಮೇಶ್ವರ ಹೆಗಡೆ ಸೇರಿದಂತೆ ಜಿಲ್ಲೆಯ ವಿವಿಧ ಠಾಣೆಗಳ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು. ಮುಂದಿನ ಮೂರು ದಿನಗಳ ಕಾಲ ವಿವಿಧ ಕ್ರೀಡಾ ಸ್ಪರ್ಧೆಗಳು ಜರುಗಲಿವೆ.

ಪೂಜೆ ಹಾಗೂ ಹಣದ ಹೊಳೆ ಹೆಸರಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆ ,ಅಕ್ಕ ಪಡೆಯಿಂದ 11 ಆರೋಪಿಗಳು ಅರೆಸ್ಟ್

Image
  ಲಕ್ಷ್ಮೀ ಪೂಜೆ ಮಾಡುವುದಾಗಿ ಹೇಳಿ, ಹಣದ ಹೊಳೆಯ ಹೆಸರಿನಲ್ಲಿ ಮುಗ್ಧ ಯುವತಿಯರನ್ನು ವಂಚಿಸಿ, ಲೈಂಗಿಕ ದೌರ್ಜನ್ಯ ಹಾಗೂ ಹೈಟೆಕ್ ವೇಶ್ಯಾವಾಟಿಕೆ ದಂಧೆಗೆಬಳಸಿಕೊಳ್ಳುತ್ತಿದ್ದ ಬೃಹತ್ ಅಂತರಾಜ್ಯ ಜಾಲವನ್ನು ಅಕ್ಕ ಪಡೆ ಪೊಲೀಸರು ಭೇದಿಸಿದ್ದಾರೆ. ‘ಅಕ್ಕ ಪಡೆ’ಯ ಮಹಿಳಾ ಪೊಲೀಸ್ ಸಿಬ್ಬಂದಿಯ ಎರಡು ತಿಂಗಳ ರಹಸ್ಯ ಕಾರ್ಯಾಚರಣೆಯ ಫಲವಾಗಿ 11 ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, ನಾಲ್ವರು ಯುವತಿಯರನ್ನು ರಕ್ಷಿಸಲಾಗಿದೆ. ಬಳ್ಳಾರಿಯಲ್ಲಿ ಈ ಘಟನೆ ನಡೆದಿದೆ. ಆರ್ಥಿಕ ಸಂಕಷ್ಟದಲ್ಲಿರುವ ಮತ್ತು ಮೂಢನಂಬಿಕೆಗಳನ್ನು ನಂಬುವ ಅವಿವಾಹಿತ ಯುವತಿಯರನ್ನೇ ಈ ಗ್ಯಾಂಗ್ ಟಾರ್ಗೆಟ್ ಮಾಡುತ್ತಿತ್ತು. ಸುಂದರವಾಗಿರುವ, ಕನಿಷ್ಠ 5 ಅಡಿ 6 ಇಂಚು ಎತ್ತರವಿರುವ ಕನ್ಯೆಯರು ವಿಶೇಷ ಲಕ್ಷ್ಮೀ ಪೂಜೆ ಮಾಡಿದರೆ ಹಣದ ಮಳೆ ಸುರಿಯುತ್ತದೆ” ಎಂದು ನಂಬಿಸಿ ಯುವತಿಯರ ಮನವೊಲಿಸಲಾಗುತ್ತಿತ್ತು. ಆರಂಭದಲ್ಲಿ ಯುವತಿಯರ ಬಲಗೈ ಮತ್ತು ಬಲಗಾಲಿನ ಪ್ರತ್ಯೇಕ ಫೋಟೋಗಳನ್ನು ಪಡೆಯುತ್ತಿದ್ದ ಆರೋಪಿಗಳು, ಪೂಜೆಯಿಂದ ಬರುವ ಹಣದಲ್ಲಿ ಯುವತಿಗೆ, ಪೂಜೆ ಮಾಡುವ ಸ್ವಾಮೀಜಿಗೆ ಹಾಗೂ ಏಜೆಂಟ್‌ಗೆ ತಲಾ ಒಂದೊಂದು ಪಾಲು ಸಿಗುತ್ತದೆ ಎಂದು ಆಮಿಷವೊಡ್ಡುತ್ತಿದ್ದರು. ಆದರೆ, ಪೂಜೆಯ ನೆಪದಲ್ಲಿ ಯುವತಿಯರನ್ನು ಕರೆಸಿಕೊಂಡು ಅವರ ಬೆತ್ತಲೆ ವಿಡಿಯೋಗಳನ್ನು ಚಿತ್ರೀಕರಿಸಿ ಬ್ಲ್ಯಾಕ್‌ಮೇಲ್ ಮಾಡುವ ಮೂಲಕ ವೇಶ್ಯಾವಾಟಿಕೆ ಮತ್ತು ಮಹಿಳಾ ಮಾರಾಟ ದಂಧೆಗೆ ಬಳಸಿಕೊಳ್ಳಲಾಗುತ್ತಿತ್ತು. ಈ ದಂಧೆಯ ಕುರಿತ...

ಕೈಯಲ್ಲಿದಿದ್ದು 200 ರೂ. ಮಾತ್ರ… ಮಗಳ ಹುಟ್ಟುಹಬ್ಬಕ್ಕೆ ಸಿಹಿ ಖರೀದಿಸಲು ಹೋದ ತಂದೆಗೆ ದಂಡ; ಕಣ್ಣೀರಿನ ಕಥೆ ಕೇಳಿ ಮಾನವೀಯತೆ ಮೆರೆದ ಪೊಲೀಸರು!

Image
 ಕೊಟ್ಟಾಯಂ : ಕೇವಲ 200 ರೂಪಾಯಿ ಹಿಡಿದು ಮಗಳ ಹುಟ್ಟುಹಬ್ಬಕ್ಕೆ ಹೊರಟಿದ್ದ ಬಡ ತಂದೆ… ದಂಡದ ರಸೀದಿ ಕಂಡು ಕಣ್ಣೀರಿಟ್ಟ ಅಪ್ಪನ ನೋವಿಗೆ ಕರಗಿದ ಅಧಿಕಾರಿಗಳು. ತಮ್ಮ ಜೇಬಿನಿಂದ ದಂಡ ಪಾವತಿಸಿ, ಕೇಕ್, ಸಿಹಿತಿಂಡಿ ಹಾಗೂ ಹೊಸ ಬಟ್ಟೆ ಕೊಡಿಸಿ ತಂದೆಯ ಕಣ್ಣೀರೊರೆಸಿದ ಹೃದಯಸ್ಪರ್ಶಿ ಘಟನೆ ಕೇರಳದ ಕೊಟ್ಟಾಯಂನಲ್ಲಿ ನಡೆದಿದೆ. ಕೇರಳದ ಕೊಟ್ಟಾಯಂನಲ್ಲಿ ನಡೆದ ಈ ಘಟನೆ ಮಾನವೀಯತೆ ಇನ್ನೂ ಜೀವಂತವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಎರುಮೇಲಿ ಮೂಲದ ಸುಜಿತ್ ಎಂಬ ಬಡ ತಂದೆ, ತನ್ನ ಮಗಳ ನಾಲ್ಕನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಬೇಕೆಂಬ ಆಸೆಯಿಂದ ಕೈಯಲ್ಲಿದ್ದ ಕೇವಲ 200 ರೂಪಾಯಿಯೊಂದಿಗೆ ಸಿಹಿತಿಂಡಿ ಖರೀದಿಸಲು ಮನೆಯಿಂದ ಹೊರಟಿದ್ದರು. ಆದರೆ, ಎರುಮೇಲಿ ಮತ್ತು ಕಾಂಜಿರಪ್ಪಳ್ಳಿ ನಡುವೆ ಮೋಟಾರು ವಾಹನ ಇಲಾಖೆ ಅಧಿಕಾರಿಗಳು ನಿಯಮಿತ ವಾಹನ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಸುಜಿತ್ ಚಲಾಯಿಸುತ್ತಿದ್ದ ದ್ವಿಚಕ್ರ ವಾಹನದಲ್ಲಿ ಸೈಡ್ ಮಿರರ್ ಇಲ್ಲದಿರುವುದು ಹಾಗೂ ಹಿಂಬದಿ ಸವಾರ ಹೆಲ್ಮೆಟ್ ಧರಿಸದಿರುವುದನ್ನು ಗಮನಿಸಿದ ಅಧಿಕಾರಿಗಳು ವಾಹನವನ್ನು ತಡೆದು 250 ರೂಪಾಯಿ ದಂಡ ವಿಧಿಸಿದರು. ದಂಡದ ರಸೀದಿ ಕೈಗೆ ಸಿಗುತ್ತಿದ್ದಂತೆ ಸುಜಿತ್ ಕಣ್ಣೀರಿಡಲು ಆರಂಭಿಸಿದ್ದು, ಇದನ್ನು ಗಮನಿಸಿದ ಎಸ್‌ಐ ಸಿಜೊ ರವೀಂದ್ರನ್ ಹಾಗೂ ಅವರ ತಂಡ, ಅವರ ನೋವಿಗೆ ಕಾರಣವೇನೆಂದು ವಿಚಾರಿಸಿದರು. ಆಗ ಬಡ ತಂದೆಯ ಅಸಹಾಯಕತೆಯ ಕಥೆ ಹೊರಬಂದಿದೆ. ಕಳೆದ ಮೂರು ವಾರಗಳಿಂದ ನನಗೆ ...