ಸಾರ್ವಜನಿಕರೇ ಭಯಬೇಡ, ನಾವಿದ್ದೇವೆ.ರಾತ್ರಿಪೂರ ಓಣಿ ಓಣಿ ಗಸ್ತು ತಿರುಗಿದ ಪೊಲೀಸ್ ಅಧಿಕಾರಿಗಳು
ಕೂಡ್ಲಿಗಿ.ಜೂ. 8 :- ಪಟ್ಟಣದಲ್ಲಿ ಮುಸುಕುಧರಿಸಿದ ಕಳ್ಳರು ಓಡಾಡುತ್ತಿದ್ದಾರೆ ಎನ್ನುವ ವಿಡಿಯೋ ವೈರಲ್ ಆಗಿದ್ದರಿಂದ ಸಾರ್ವಜನಿಕರಲ್ಲಿ ಭಯಹುಟ್ಟಿಸಿದ ವಾತಾವರಣ ನಿರ್ಮಾಣವಾಗಿದ್ದು ಇದನ್ನರಿತ ಕೂಡ್ಲಿಗಿ ಪೊಲೀಸ್ ಉಪ ವಿಭಾಗದ ಡಿವೈಎಸ್ಪಿ ಸೇರಿದಂತೆ ಉಪವಿಭಾಗದ ಸಿಪಿಐ ಹಾಗೂ ಪಿಎಸ್ಐಗಳು ರಾತ್ರಿಪೂರ ಓಣಿ ಓಣಿಗಳಲ್ಲಿ ನಡೆದುಕೊಂಡು ರಾತ್ರಿಪೂರ ಗಸ್ತು ನಡೆಸಿದರು.
ಹೊಸಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾನಾಮಡುಗಿನಲ್ಲಿ ಎರಡು -ಮೂರು ಮನೆಗಳು ಕಳ್ಳತನವಾಗಿವೆ ಎನ್ನುವ ಸುದ್ದಿ ಹರಡಿತ್ತು ಆದರೆ ಇದರ ಕುರಿತಂತೆ ಯಾವುದೇ ಪ್ರಕರಣ ದಾಖಲಾಗಿರಲಿಲ್ಲ ಈ ಸುದ್ದಿಯ ಬೆನ್ನಲ್ಲೇ ಕೂಡ್ಲಿಗಿ ಪಟ್ಟಣದ ಬಸವೇಶ್ವರ ವೃತ್ತದ ಸಮೀಪದಲ್ಲಿರುವ ಮನೆಗಳ ಹತ್ತಿರ ಮುಖಕ್ಕೆ ಮುಸುಕು ಧರಿಸಿಕೊಂಡ ವ್ಯಕ್ತಿಗಳು ಸುತ್ತಾಡುತ್ತಿದ್ದಾರೆ ಎನ್ನುವ ಕೆಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಪಟ್ಟಣದಲ್ಲಿ ವಿಂಡ್ ಫ್ಯಾನ್ ಹಾಗೂ ಸೋಲಾರ್ ಕಂಪನಿಯಲ್ಲಿ ಕೆಲಸ ಮಾಡುವ ಅಂತಾರಾಜ್ಯ ಕೂಲಿ ಕಾರ್ಮಿಕರಿರಬಹುದು ಎಂದು ಪೊಲೀಸರು ಅಂದಾಜಿಸುವ ಮೂಲಕ ಕಳ್ಳ ಕಾಕರರ ಭಯ ಹೆಚ್ಚಾಗುತ್ತಿದ್ದಂತೆ ಕಂಡು ಬರುತ್ತಿರುವುದನ್ನ ಕಂಡ ಪೊಲೀಸರು ಕೂಡ್ಲಿಗಿ ಡಿವೈಎಸ್ಪಿ ಮಲ್ಲೇಶ ದೊಡ್ಡಮನಿ ನೇತೃತ್ವದಲ್ಲಿಕೂಡ್ಲಿಗಿ, ಕೊಟ್ಟೂರು ಹಾಗೂ ಹಗರಿಬೊಮ್ಮನಹಳ್ಳಿ ಸಿಪಿಐಗಳು ಮತ್ತು ಕೂಡ್ಲಿಗಿ, ಗುಡೇಕೋಟೆ, ಹೊಸಹಳ್ಳಿ, ಕೊಟ್ಟೂರು, ಹಗರಿಬೊಮ್ಮನಹಳ್ಳಿ ಹಾಗೂ ಮರಿಯಮ್ಮನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಪಿಎಸ್ಐಗಳು ಕೂಡ್ಲಿಗಿ ಸಾರಿಗೆ ಸಂಸ್ಥೆ ಬಸ್ ನಿಲ್ದಾಣ ಸೇರಿದಂತೆ ಪಟ್ಟಣದ ಓಣಿ ಓಣಿಗಳಲ್ಲಿ ನಡೆದುಕೊಂಡು ಓಡಾಡುವ ಮೂಲಕ ನಿಮ್ಮ ಜೊತೆ ನಾವಿದ್ದೇವೆ ಭಯಬೇಡ ಎಂದು ಸಾರ್ವಜನಿಕರಲ್ಲಿ ಆತ್ಮಸ್ಥೈರ್ಯ ತುಂಬುವ ಮೂಲಕ
ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಮತ್ತು ಸಾರ್ವಜನಿಕರಲ್ಲಿ ಸುರಕ್ಷತಾ ಭಾವನೆಯನ್ನು ಮೂಡಿಸಲು ಪೊಲೀಸರು ಮುಂದಾಗಿದ್ದಾರೆ
TV NEWS KANNADA ASIAN NETWORK

Comments
Post a Comment