ದಾವಣಗೆರೆ: ಕುಡಿದು ವಾಹನ ಚಾಲನೆ ಮಾಡಿ ಪೊಲೀಸರೊಂದಿಗೆ ಯುವತಿಯ ರಂಪಾಟ!
ದಾವಣಗೆರೆಯ ಶಾಮನೂರು ರಸ್ತೆಯಲ್ಲಿ ಗುರುವಾರ ರಾತ್ರಿ ನಡೆದ ಘಟನೆಯೊಂದರಲ್ಲಿ, ಯುವತಿಯೊಬ್ಬಳು ಮದ್ಯಪಾನ ಮಾಡಿ ಏಕಮುಖ ರಸ್ತೆಯಲ್ಲಿ (ಒನ್-ವೇ) ವಿರುದ್ಧ ದಿಕ್ಕಿನಲ್ಲಿ ಥಾರ್ ಜೀಪ್ ಚಾಲನೆ ಮಾಡಿದ್ದಾಳೆ. ವಾಹನವನ್ನು ತಡೆದ ಪೊಲೀಸರೊಂದಿಗೆ ಆಕೆ ವಾಗ್ವಾದಕ್ಕಿಳಿದು ರಂಪಾಟ ನಡೆಸಿದ್ದಾಳೆ.
ಘಟನೆಯ ವಿವರ:
ಪ್ರೀತಿ ಎಂಬ ಹೆಸರಿನ ಯುವತಿ ಮದ್ಯಪಾನ ಮಾಡಿ ಥಾರ್ ಜೀಪ್‌ನಲ್ಲಿ ಒನ್-ವೇ ರಸ್ತೆಯಲ್ಲಿ ಅಜಾಗರೂಕತೆಯಿಂದ ಚಾಲನೆ ಮಾಡುತ್ತಿದ್ದಳು.
ಪೊಲೀಸರು ಆಕೆಯ ವಾಹನವನ್ನು ತಡೆದಾಗ, ಆಕೆ ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಾಳೆ. ಅಲ್ಲದೆ, ನಶೆಯಲ್ಲಿದ್ದ ಯುವತಿ ಮಹಿಳಾ ಪಿಎಸ್ಐ ಅವರಿಗೆ ಕಾಲಿನಿಂದ ಒದೆಯುವ ರೀತಿಯಲ್ಲಿ ವರ್ತಿಸಿ, "ನಾನು ಯಾರು ಗೊತ್ತೇನೋ, ನಿಮ್ಮನ್ನು ಸುಮ್ಮನೆ ಬಿಡಲ್ಲ" ಎಂದು ಪೊಲೀಸರಿಗೆ ಅವಾಜ್ ಹಾಕಿದ್ದಾಳೆ.
ಈ ಯುವತಿ ದಾವಣಗೆರೆಯ ಪ್ರತಿಷ್ಠಿತ ವ್ಯಕ್ತಿಯೊಬ್ಬರ ಪುತ್ರಿ ಎಂದು ಹೇಳಲಾಗುತ್ತಿದ್ದು, ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕರ್ತವ್ಯಕ್ಕೆ ಅಡ್ಡಿಪಡಿಸಿದ ಯುವತಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.

Comments
Post a Comment