KPME ಕಾಯ್ದೆ ಉಲ್ಲಂಘಿಸುವ ಕ್ಲಿನಿಕ್, ಆಸ್ಪತ್ರೆಗಳಿಗೆ ಗಂಡಾಂತರ; ನಿಯಮ ಮೀರಿದರೆ ಗರಿಷ್ಠ ₹5 ಲಕ್ಷ ದಂಡ ಹಾಗೂ 3 ವರ್ಷ ಜೈಲು ಶಿಕ್ಷೆ!

 

KPME ಕಾಯ್ದೆ ಉಲ್ಲಂಘಿಸುವ ಕ್ಲಿನಿಕ್, ಆಸ್ಪತ್ರೆಗಳಿಗೆ ಗಂಡಾಂತರ; ನಿಯಮ ಮೀರಿದರೆ ಗರಿಷ್ಠ ₹5 ಲಕ್ಷ ದಂಡ ಹಾಗೂ 3 ವರ್ಷ ಜೈಲು ಶಿಕ್ಷೆ!

ರಾಜ್ಯಾದ್ಯಂತ ಇತ್ತೀಚಿನ ದಿನಗಳಲ್ಲಿ ಖಾಸಗಿ ಕ್ಲಿನಿಕ್‌ಗಳು, ಡಯಾಗ್ನೋಸ್ಟಿಕ್ ಸೆಂಟರ್‌ಗಳು ಹಾಗೂ ಆಸ್ಪತ್ರೆಗಳ ಹಾವಳಿ ಹೆಚ್ಚಾಗುತ್ತಿದೆ. ಆದರೆ, ಸಾರ್ವಜನಿಕರ ಜೀವದ ಜೊತೆ ಆಟವಾಡುವ ಇಂತಹ ವೈದ್ಯಕೀಯ ಸಂಸ್ಥೆಗಳು ಕಡ್ಡಾಯವಾಗಿ KPME (Karnataka Private Medical Establishments Act) ಕಾಯ್ದೆಯಡಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಒಂದು ವೇಳೆ ಈ ನಿಯಮವನ್ನು ಉಲ್ಲಂಘಿಸಿದರೆ ಕಾನೂನಿನ ಅಡಿಯಲ್ಲಿ ಅತ್ಯಂತ ಕಠಿಣ ಶಿಕ್ಷೆ ಮತ್ತು ಭಾರಿ ದಂಡ ವಿಧಿಸಲು ಕಾಯ್ದೆಯಲ್ಲಿ ಗಟ್ಟಿಯಾದ ಅವಕಾಶವಿದೆ.

ಏನಿದು KPME ಕಾಯ್ದೆ?

ಕರ್ನಾಟಕದಲ್ಲಿ ಸಾರ್ವಜನಿಕರಿಗೆ ಗುಣಮಟ್ಟದ ವೈದ್ಯಕೀಯ sevi ಸಿಗಬೇಕು ಮತ್ತು ಖಾಸಗಿ ಆಸ್ಪತ್ರೆಗಳ ಲೂಟಿಗೆ ಬ್ರೇಕ್ ಹಾಕಬೇಕು ಎಂಬ ಉದ್ದೇಶದಿಂದ ಸರ್ಕಾರ 'ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆ' (KPME) ಯನ್ನು ಜಾರಿಗೆ ತಂದಿದೆ. ರಾಜ್ಯದಲ್ಲಿ ಪ್ರಾಕ್ಟಿಸ್ ಮಾಡುವ ಪ್ರತಿಯೊಬ್ಬ ಖಾಸಗಿ ವೈದ್ಯರು, ಕ್ಲಿನಿಕ್, ನರ್ಸಿಂಗ್ ಹೋಮ್ ಅಥವಾ ಲ್ಯಾಬ್‌ಗಳು ಈ ಕಾಯ್ದೆಯಡಿ ಆರೋಗ್ಯ ಇಲಾಖೆಯಲ್ಲಿ ಕಡ್ಡಾಯವಾಗಿ ನೋಂದಣಿ (Registration) ಮಾಡಿಕೊಳ್ಳಬೇಕು ಮತ್ತು ಪ್ರತಿ ಐದು ವರ್ಷಕ್ಕೊಮ್ಮೆ ಅದನ್ನು ನವೀಕರಣ (Renewal) ಮಾಡಿಸುವುದು ಕಡ್ಡಾಯ


.ಪ್ರಸ್ತುತ ಜಾರಿಯಲ್ಲಿರುವ KPME ನಿಯಮ ಉಲ್ಲಂಘನೆಯ ಕಠಿಣ ಶಿಕ್ಷೆ ಮತ್ತು ದಂಡದ ವಿವರಗಳು:

ಕಾಯ್ದೆಯ ಸೆಕ್ಷನ್ 19ರ ಪ್ರಕಾರ, ನಿಯಮಗಳನ್ನು ಗಾಳಿಗೆ ತೂರಿ ಕಾನೂನುಬಾಹಿರವಾಗಿ ವೈದ್ಯಕೀಯ ಸಂಸ್ಥೆಗಳನ್ನು ನಡೆಸಿದರೆ ಈ ಕೆಳಗಿನ ಕಠಿಣ ಶಿಕ್ಷೆಗಳನ್ನು ವಿಧಿಸಲಾಗುತ್ತದೆ:


ಅನಧಿಕೃತ ಕ್ಲಿನಿಕ್/ಆಸ್ಪತ್ರೆ ನಡೆಸಿದರೆ:

ಯಾವುದೇ ಅಧಿಕೃತ KPME ನೋಂದಣಿ ಇಲ್ಲದೆ ಖಾಸಗಿ ಕ್ಲಿನಿಕ್ ಅಥವಾ ಆಸ್ಪತ್ರೆ ನಡೆಸುತ್ತಿರುವುದು ಸಾಬೀತಾದರೆ, ಕಾನೂನಿನ ಅಡಿಯಲ್ಲಿ ಕನಿಷ್ಠ ₹25,000/- ದಿಂದ ಗರಿಷ್ಠ ₹5,00,000/- (5 ಲಕ್ಷ ರೂಪಾಯಿ) ವರೆಗೆ ಭಾರಿ ದಂಡ ವಿಧಿಸಲಾಗುತ್ತದೆ. ಜೊತೆಗೆ ಆ ಸಂಸ್ಥೆಯನ್ನು ತಕ್ಷಣವೇ ಮುಚ್ಚಿಸಿ ಬೀಗ ಜಡಿಯಲಾಗುತ್ತದೆ

ಕಠಿಣ ಜೈಲು ಶಿಕ್ಷೆಯ ಕಾನೂನು:

ದಂಡದ ಮೊತ್ತದ ಜೊತೆಗೆ, ನೋಂದಣಿ ಇಲ್ಲದೆ ಸಾರ್ವಜನಿಕರಿಗೆ ಚಿಕಿತ್ಸೆ ನೀಡುವುದು ಅಪರಾಧ ಹಿನ್ನೆಲೆಯಡಿ ಸಾಬೀತಾದರೆ, ಮಾಲೀಕರಿಗೆ ಅಥವಾ ನಕಲಿ ವೈದ್ಯರಿಗೆ ಕನಿಷ್ಠ 6 ತಿಂಗಳಿಂದ ಗರಿಷ್ಠ 3 ವರ್ಷಗಳವರೆಗೆ ಕಠಿಣ ಜೈಲು ಶಿಕ್ಷೆ ವಿಧಿಸಲು ನ್ಯಾಯಾಲಯಕ್ಕೆ ಮುಕ್ತ ಅಧಿಕಾರವಿದೆ.


ನಿಗದಿತ ಫಲಕ ಹಾಗೂ ಚಿಕಿತ್ಸಾ ದರ ಪ್ರದರ್ಶಿಸದಿದ್ದರೆ:

ಪ್ರತಿಯೊಂದು ಆಸ್ಪತ್ರೆ ಅಥವಾ ಕ್ಲಿನಿಕ್‌ನ ಮುಂಭಾಗದಲ್ಲಿ ತಮ್ಮ KPME ನೋಂದಣಿ ಸಂಖ್ಯೆ ಮತ್ತು ಚಿಕಿತ್ಸಾ ದರಗಳ ಪಟ್ಟಿಯನ್ನು ಸಾರ್ವಜನಿಕರಿಗೆ ಕಾಣಿಸುವಂತೆ ಕಡ್ಡಾಯವಾಗಿ ಪ್ರದರ್ಶಿಸಬೇಕು. ಇದನ್ನು ಉಲ್ಲಂಘಿಸಿದರೆ ₹50,000/- ವರೆಗೆ ದಂಡ ವಿಧಿಸಲಾಗುತ್ತದೆ.

ಮಾಧ್ಯಮಗಳ ಕಣ್ಗಾವಲು: ಸಾರ್ವಜನಿಕರೇ ಎಚ್ಚರ!

ಅರ್ಹತೆ ಇಲ್ಲದ ನಕಲಿ ವೈದ್ಯರು (Fake Doctors) ಮತ್ತು ಆಯುಷ್ ಪದವಿ ಪಡೆದು ಅಲೋಪತಿ (English Medicine) ಚಿಕಿತ್ಸೆ ನೀಡುವ ಕ್ಲಿನಿಕ್‌ಗಳ ವಿರುದ್ಧ ಆರೋಗ್ಯ ಇಲಾಖೆ ಹಾಗೂ ಜಿಲ್ಲಾಡಳಿತ ಕಠಿಣ ಕ್ರಮಕ್ಕೆ ಮುಂದಾಗಿದೆ. ಸಾರ್ವಜನಿಕರು ತಾವು ಭೇಟಿ ನೀಡುವ ಕ್ಲಿನಿಕ್‌ಗಳಲ್ಲಿ 'KPME ನೋಂದಣಿ ಪ್ರಮಾಣಪತ್ರ' ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.


TV NEWS KANNADA ಮಾಧ್ಯಮವು ಇಂತಹ ಅಕ್ರಮ ಹಾಗೂ ಅನಧಿಕೃತ ಕ್ಲಿನಿಕ್‌ಗಳು ಮತ್ತು ಇಲಾಖೆಯ ನಿಯಮಾವಳಿಗಳನ್ನು ಗಾಳಿಗೆ ತೂರಿ ನಡೆಯುತ್ತಿರುವ ವೈದ್ಯಕೀಯ ಸಂಸ್ಥೆಗಳ ವಿರುದ್ಧ ನಿರಂತರವಾಗಿ ಗ್ರೌಂಡ್ ರಿಯಾಲಿಟಿ ಚೆಕ್ ನಡೆಸಿ, ಸಾರ್ವಜನಿಕರ ಪರವಾಗಿ ಧ್ವನಿ ಎತ್ತುತ್ತಲೇ ಇರುತ್ತದೆ.


ವಿಶೇಷ ತನಿಖಾ ವರದಿ:  TV NEWS KANNADA ASIAN NETWORK 

Comments

Popular posts from this blog

ಚಾರ್ವಿಕ ಟೂರ್ಸ್ ಅಂಡ್ ಟ್ರಾವೆಲ್ಸ್‌ನಿಂದ ಪ್ರಥಮ ವರ್ಷದ ವಾರ್ಷಿಕೋತ್ಸವದ ಧಮಾಕಾ ಆಫರ್; ಕೇವಲ ₹2,100 ರಲ್ಲಿ 4 ವರ್ಷಗಳ ಸುದೀರ್ಘ ಪ್ರವಾಸ ಯೋಜನೆ!

ತಂದೆ-ತಾಯಿಯ 13 ವರ್ಷಗಳ ಕನಸು ನನಸು ಮಾಡಿದ ಮಗ: ಕಟ್ಟಿಗೆಹಳ್ಳಿಯಲ್ಲಿ ಅದ್ದೂರಿ ಗೃಹಪ್ರವೇಶ!

ದಾವಣಗೆರೆ ಕಾರ್ಗಿಲ್​ ಕಾರ್ಖಾನೆಯಲ್ಲಿ ಉತ್ಪಾದನೆ ಸ್ಥಗಿತ: ನ್ಯಾಯಕ್ಕಾಗಿ ಕಾರ್ಮಿಕರು ಹೋರಾಟ