ಒಂದೇ ಕುಟುಂಬದ ನಾಲ್ವರು ನಾಪತ್ತೆ ಕೇಸ್‌ಗೆ ಟ್ವಿಸ್ಟ್ – ಲಾಭದಾಸೆ ಹುಟ್ಟಿಸಿ 30 ಕೋಟಿ ದೋಚಿಕೊಂಡು ಎಸ್ಕೇಪ್


 ದಾವಣಗೆರೆ: ಜಿಲ್ಲೆಯಲ್ಲಿ ಇತ್ತೀಚೆಗೆ ದಾಖಲಾಗಿದ್ದ ಒಂದೇ ಕುಟುಂಬದ ನಾಲ್ವರ ನಿಗೂಢ ನಾಪತ್ತೆ ಪ್ರಕರಣಕ್ಕೆ ಈಗ ಬೆಚ್ಚಿ ಬೀಳಿಸುವ ಮಹಾ ಟ್ವಿಸ್ಟ್ ಸಿಕ್ಕಿದೆ. ಮೇಲ್ನೋಟಕ್ಕೆ ಸಾಧಾರಣ ನಾಪತ್ತೆ ಎನ್ನಲಾಗುತ್ತಿದ್ದ ಈ ಪ್ರಕರಣದ ಬೃಹತ್ ವಂಚನಾ ಜಾಲ ಬಯಲಾಗಿದೆ.

ಷೇರ್ ಮಾರ್ಕೆಟ್‌ನಲ್ಲಿ ಹೂಡಿಕೆ ಮಾಡಿ ತಿಂಗಳಿಗೆ 1 ಲಕ್ಷ ರೂ. ಲಾಭ ಕೊಡೋದಾಗಿ ಆಸೆ ಹುಟ್ಟಿಸಿ ರಮೇಶ್ ಕುಮಾರ್ ಎಂಬಾತ ಕೆಲವರಿಂದ 30 ಕೋಟಿ ರೂ. ಅಧಿಕ ಹಣ ಪಡೆದಿದ್ದ. ಇದೀಗ ಷೇರು ಪೇಟೆಯಲ್ಲಿ ಹಣ ಕಳೆದುಕೊಂಡು ಹೆಂಡ್ತಿ-ಮಕ್ಕಳ ಜೊತೆ ಊರು ಬಿಟ್ಟಿದ್ದಾನೆ.

ಹಣ ಪಡೆದುಕೊಳ್ಳುವಾಗ 1 ಲಕ್ಷ ರೂ.ಗೆ ಪ್ರತಿ ತಿಂಗಳು 8 ಸಾವಿರ ರೂ. ಬಡ್ಡಿ ಕೊಡುವ ಆಮಿಷ ಒಡ್ಡಿದ್ದ. ಈ ರೀತಿ ಅಂದಾಜು ಮೊತ್ತ 25 ರಿಂದ 30 ಕೋಟಿ ರೂ. ಹಣ ಪೀಕಿದ್ದ ಎನ್ನಲಾಗ್ತಿದೆ. 150ಕ್ಕೂ ಹೆಚ್ಚು ಫೋಟೋಗ್ರಾಫರ್ಸ್, ಪತ್ರಕರ್ತರು, ನೌಕರರು ಹಾಗೂ ಸಾರ್ವಜನಿಕರು ಮೋಸಕ್ಕೆ ಒಳಗಾಗಿದ್ದಾರೆ.

ಹಣ ನೀಡಿದ ನೂರಾರು ಮಂದಿ ರಮೇಶ್ ಕುಮಾರ್ ಮನೆಗೆ ಮುಗಿಬಿದ್ದು ಗಲಾಟೆ ಆರಂಭಿಸಿದ್ದರು. ಜನರ ಒತ್ತಡ ಹಾಗೂ ಸಾಲದ ಸುಳಿಗೆ ಸಿಲುಕಿ ಕಂಗಾಲಾದ ರಮೇಶ್ ಕುಮಾರ್, ಅನ್ಯಮಾರ್ಗ ಕಾಣದೇ ಕುಟುಂಬದ ನಾಲ್ವರೊಂದಿಗೆ ಊರು ಬಿಟ್ಟು ಪರಾರಿಯಾಗಿದ್ದಾರೆ. ಈತನ ವಿರುದ್ಧ 2023ರಲ್ಲೇ ದಾವಣಗೆರೆ ಬಡಾವಣೆ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿತ್ತು. ಆದರೂ ಆತನನ್ನು ಮಟ್ಟಹಾಕದ ಕಾರಣ ಇಂದು ನೂರಾರು ಕುಟುಂಬಗಳು ಬೀದಿಗೆ ಬೀಳುವಂತಾಗಿದೆ

Comments

Popular posts from this blog

ಚಾರ್ವಿಕ ಟೂರ್ಸ್ ಅಂಡ್ ಟ್ರಾವೆಲ್ಸ್‌ನಿಂದ ಪ್ರಥಮ ವರ್ಷದ ವಾರ್ಷಿಕೋತ್ಸವದ ಧಮಾಕಾ ಆಫರ್; ಕೇವಲ ₹2,100 ರಲ್ಲಿ 4 ವರ್ಷಗಳ ಸುದೀರ್ಘ ಪ್ರವಾಸ ಯೋಜನೆ!

ತಂದೆ-ತಾಯಿಯ 13 ವರ್ಷಗಳ ಕನಸು ನನಸು ಮಾಡಿದ ಮಗ: ಕಟ್ಟಿಗೆಹಳ್ಳಿಯಲ್ಲಿ ಅದ್ದೂರಿ ಗೃಹಪ್ರವೇಶ!

ದಾವಣಗೆರೆ ಕಾರ್ಗಿಲ್​ ಕಾರ್ಖಾನೆಯಲ್ಲಿ ಉತ್ಪಾದನೆ ಸ್ಥಗಿತ: ನ್ಯಾಯಕ್ಕಾಗಿ ಕಾರ್ಮಿಕರು ಹೋರಾಟ