ಕೊಟ್ಟೂರಿನಲ್ಲಿ ಯುವ ಭಾರತೀಯರ ವೇದಿಕೆ ವತಿಯಿಂದ 5ನೇ ವರ್ಷದ ಗಣೇಶೋತ್ಸವ ಹಾಗೂ ಧಣಿ ಧ್ವನಿ ಕಾರ್ಯಕ್ರಮ ಯಶಸ್ವಿ


 ಕೊಟ್ಟೂರು:

ಯುವ ಭಾರತೀಯರ ವೇದಿಕೆ, ಕೊಟ್ಟೂರು ವತಿಯಿಂದ 5ನೇ ವರ್ಷದ ಗಣೇಶೋತ್ಸವದ ಸಂಭ್ರಮದ ಅಂಗವಾಗಿ ‘ಧ್ವನಿ ಧ್ವನಿ’ ಸಾಂಸ್ಕೃತಿಕ ಕಾರ್ಯಕ್ರಮವು ಅತ್ಯಂತ ವಿಜೃಂಭಣೆಯಿಂದ ಜರುಗಿತು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಡೋಣ್ಹೋರು ಜಾನುಕೋಟಿ ಮಠದ ಪೂಜ್ಯ ಶ್ರೀ ಡಾ. ಸಿದ್ದಲಿಂಗ ಶಿವಚಾರ್ಯ ಸ್ವಾಮಿಗಳು ವಹಿಸಿದ್ದರು. ಕಾರ್ಯಕ್ರಮವನ್ನು ಶ್ರೀ ಡಾ. ತಿಪ್ಪೇಸ್ವಾಮಿ ವೆಂಕಟೇಶ್ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಎಂ.ಎಂ.ಜೆ ಶೋಭಿತ್ ವಹಿಸಿದ್ದರು.


ಗಣ್ಯರ ಉಪಸ್ಥಿತಿ:

ಮುಖ್ಯ ಅತಿಥಿಗಳಾಗಿ ದಾರುಕೇಶ್.ಎಂ.ಎಂ, ಅಟ್ಟಾವಳಿಗೆ ಸಂತೋಷ್, ಅಂಗಡಿ ಪಂಪಾಪತಿ, ವಿಕ್ರಮ್ ನಂದಿ, ನಲ್ಲಿ ಪ್ರಕಾಶ್ ಹಾಗೂ ನಿಲುಂಜಿ ನಾಗರಾಜ್ ಉಪಸ್ಥಿತರಿದ್ದರು.

ವಿಶೇಷ ಸನ್ಮಾನ ಹಾಗೂ ಅಭಿನಂದನೆ:

ಸಮಾಜಮುಖಿ ಹಾಗೂ ಕಲಾ ಸೇವೆ ಸಲ್ಲಿಸಿದ ವಿವಿಧ ಕ್ಷೇತ್ರಗಳ ಸಾಧಕರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು:


ವಿನಯ್ ಕುಮಾರ್ ಚಿತ್ರಗಾರ (ಗಣೇಶ ಮೂರ್ತಿ ತಯಾರಕರು)

ಬಂಡ್ರಿ ಪ್ರಕಾಶ್ ಹಾಗೂ ವೀರಬಸಪ್ಪ (ಪ್ರಸಾದ ತಯಾರಕರು)

ನಿಲುಂಜಿ ವೀರೇಶ್ (ಶಾಮಿಯಾನ ವಿತರಕರು)

ಬಂಡ್ರಿ ಕಾಲೇಶ್ (ಶ್ರೀ ಬನಶಂಕರಿ ದೇವಸ್ಥಾನ ಸೇವ ಸಮಿತಿ)

ದೊಡ್ಡ ವೀರಯ್ಯ (ಶಾಸ್ತ್ರಿಗಳು)

ಆದರ್ಶ್ (ಛಾಯಾಗ್ರಾಹಕರು)

ಇಶೋಕ್ (ಆರ್ಟ್ಸ್ & ಪೇಂಟ್ಸ್)


ಸಾಂಸ್ಕೃತಿಕ ವೈಭವ:

ವೇದಿಕೆಯಲ್ಲಿ ಜ್ಯೋತಿ ಹರೀಶ್ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಆಕರ್ಷ್ ಹಳೆಮನಿ ಸ್ವಾಗತ ಹಾಗೂ ಪ್ರಾಸ್ತಾವಿಕ ನುಡಿಗಳನ್ನಾಡಿದರು. ನಿರೂಪಣೆಯನ್ನು ನಿರಂಜನ್ ನೆರವೇರಿಸಿಕೊಟ್ಟರೆ, ವಿಶ್ವರಾಧ್ಯ ಸಿ.ಎಂ ವಂದನಾರ್ಪಣೆಗೈದರು. ಶ್ರೀ ಗುರು ಕೊಟ್ಟೂರೇಶ್ವರ ಭರತನಾಟ್ಯ ಶಾಲೆ ಮತ್ತು ಶ್ರೀ ಶಿವರಾತ್ರೇಶ್ವರ ಜಾನಪದ ಕಾಲಾನಿಕೇತನ, ಕೊಟ್ಟೂರು ಹಾಗೂ ರಿಧಮ್ ಡ್ಯಾನ್ಸ್ ಸ್ಟುಡಿಯೋ ಕಲಾವಿದರಿಂದ ನೃತ್ಯ, ಭರತನಾಟ್ಯ ಮತ್ತು ವಿವಿಧ ವಾದ್ಯ ಹಾಗೂ ಗಾಯನ ಕಾರ್ಯಕ್ರಮಗಳು ಪ್ರೇಕ್ಷಕರನ್ನು ರಂಜಿಸಿದವು.

Comments

Popular posts from this blog

ಚಾರ್ವಿಕ ಟೂರ್ಸ್ ಅಂಡ್ ಟ್ರಾವೆಲ್ಸ್‌ನಿಂದ ಪ್ರಥಮ ವರ್ಷದ ವಾರ್ಷಿಕೋತ್ಸವದ ಧಮಾಕಾ ಆಫರ್; ಕೇವಲ ₹2,100 ರಲ್ಲಿ 4 ವರ್ಷಗಳ ಸುದೀರ್ಘ ಪ್ರವಾಸ ಯೋಜನೆ!

ತಂದೆ-ತಾಯಿಯ 13 ವರ್ಷಗಳ ಕನಸು ನನಸು ಮಾಡಿದ ಮಗ: ಕಟ್ಟಿಗೆಹಳ್ಳಿಯಲ್ಲಿ ಅದ್ದೂರಿ ಗೃಹಪ್ರವೇಶ!

ದಾವಣಗೆರೆ ಕಾರ್ಗಿಲ್​ ಕಾರ್ಖಾನೆಯಲ್ಲಿ ಉತ್ಪಾದನೆ ಸ್ಥಗಿತ: ನ್ಯಾಯಕ್ಕಾಗಿ ಕಾರ್ಮಿಕರು ಹೋರಾಟ