ದಾವಣಗೆರೆ : ಕುಡಿದ ಮತ್ತಿನಲ್ಲಿ ಏನು ಮಾಡುತ್ತಿದ್ದೇನೆಂಬುವುದನ್ನು ಯೋಚಿಸದೆ ಮಹಿಳೆಯೊಬ್ಬಳು ತನ್ನ ಪ್ರೀಯಕರನ್ನೇ ಭೀಕರವಾಗಿ ಕೊಲೆ ಮಾಡಿರುವ ಘಟನೆಯೊಂದು ಬೆಳಕಿಗೆ ಬಂದಿದೆ.
ದಾವಣಗೆರೆ : ಕುಡಿದ ಮತ್ತಿನಲ್ಲಿ ಏನು ಮಾಡುತ್ತಿದ್ದೇನೆಂಬುವುದನ್ನು ಯೋಚಿಸದೆ ಮಹಿಳೆಯೊಬ್ಬಳು ತನ್ನ ಪ್ರೀಯಕರನ್ನೇ ಭೀಕರವಾಗಿ ಕೊಲೆ ಮಾಡಿರುವ ಘಟನೆಯೊಂದು ಬೆಳಕಿಗೆ ಬಂದಿದೆ. ಈ ಘಟನೆ ನಡೆದಿರೋದು ದಾವಣಗೆರೆಯಲ್ಲಿ. ಮಂಜಪ್ಪ (40) ಕೊಲೆಯಾದ ದುರ್ದೈವಿ. ಶಬೀನಾ (38) ಕೊಲೆಗೈದ ಆರೋಪಿ. ಹೌದು… ಗಂಡನಿಂದ ವಿಚ್ಛೇದನ ಪಡೆದಿದ್ದ ಶಬೀನಾ ಮತ್ತು ಹೆಂಡತಿ, ಮಕ್ಕಳಿಂದ ದೂರವಿದ್ದ ಮಂಜಪ್ಪ ನಡುವೆ ಪ್ರೀತಿಯಾಗಿದ್ದು, ಬಳಿಕ ಇಬ್ಬರು ಒಟ್ಟಿಗೆ ವಾಸವಿದ್ದರು ಎಂದು ತಿಳಿದು ಬಂದಿದೆ.
ಎಂದಿನಂತೆ ಮದ್ಯ ಸೇವಿಸಿದ ಅಮಲಿನಲ್ಲಿ ಇಬ್ಬರ ನಡುವೆ ಗಲಾಟೆ ನಡೆದಿದ್ದು, ಈ ವೇಳೆ ಶಬೀನಾ ಸೀರೆಯಿಂದ ಮಂಜಪ್ಪನ ಕತ್ತು ಬಿಗಿದು ಕೊಲೆ ಮಾಡಿದ್ದಾಳೆ ಎನ್ನಲಾಗಿದೆ.
ಘಟನೆ ಕುರಿತು ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಶಬೀನಾಳನ್ನು ಬಂಧಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿಸಿದ್ದಾರೆ.

Comments
Post a Comment