ಹೊಟ್ಟೆಪಾಡಿಗಾಗಿ ಮತ್ತೆ ಬುಟ್ಟಿ ಹೆಣೆಯಲು ಮುಂದಾದ ಪದ್ಮಶ್ರೀ ಪುರಸ್ಕೃತೆ ಮಂಜಮ್ಮ ಜೋಗತಿ


 ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಮರಿಯಮ್ಮನಹಳ್ಳಿ ಪಟ್ಟಣದಲ್ಲಿ ನೆಲೆಸಿರುವ ಮಂಜಮ್ಮ ಜೋಗತಿ ಅವರು, ಸದ್ಯ ಬದುಕು ಸಾಗಿಸಲು ನಿತ್ಯ ಶ್ರಮಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದು ಬುಟ್ಟಿಯನ್ನು ಹೆಣೆಯಲು ಅವರು ಬರೋಬ್ಬರಿ ಒಂದು ದಿನದ ಶ್ರಮವನ್ನು ಹಾಕುತ್ತಿದ್ದಾರೆ. ಸುಮಾರು 300 ರೂಪಾಯಿ ವೆಚ್ಚದಲ್ಲಿ ಸಿದ್ಧವಾಗುವ ಬುಟ್ಟಿಗಳನ್ನು(Basket Weaving ) 400 ರಿಂದ 500 ರೂಪಾಯಿಗೆ ಮಾರಾಟ ಮಾಡುವ ಮೂಲಕ ಅಲ್ಪ ಆದಾಯ ಕಂಡುಕೊಳ್ಳುತ್ತಿದ್ದಾರೆ.

ಪದ್ಮಶ್ರೀ ಪ್ರಶಸ್ತಿ ಬಂದ ಹೊಸತರಲ್ಲಿ ಹಲವು ಸಂಘ-ಸಂಸ್ಥೆಗಳು ಮಂಜಮ್ಮ ಜೋಗತಿ ಅವರನ್ನು ವಿವಿಧ ಕಾರ್ಯಕ್ರಮಗಳಿಗೆ ಆಹ್ವಾನಿಸಿ, ಗೌರವ ಸಂಭಾವನೆ ನೀಡಿ ಸನ್ಮಾನಿಸುತ್ತಿದ್ದವು. ಆದರೆ, ದಿನಕಳೆದಂತೆ ಕಾರ್ಯಕ್ರಮಗಳ ಆಹ್ವಾನವೂ ಕಡಿಮೆಯಾಗಿದ್ದು, ಗೌರವ ಸಂಭಾವನೆಯೂ ಇಲ್ಲದಂತಾಗಿದೆ. ಇದರ ಜೊತೆಗೆ ಸರ್ಕಾರದಿಂದ ಬರುವ ಮಾಶಾಸನವೂ ಸಮರ್ಪಕವಾಗಿ ಕೈಸೇರದ ಕಾರಣ, ದೈನಂದಿನ ಜೀವನ ನಿರ್ವಹಣೆಗೆ ತೀವ್ರ ಪರದಾಡುವಂತಾಗಿದೆ.

ಯಾರ ಮುಂದೆಯೂ ಕೈಚಾಚದೆ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ನಿರ್ಧರಿಸಿರುವ ಹಿರಿಯ ಕಲಾವಿದೆ, ತಮ್ಮ ಕೈಕಸುಬನ್ನೇ ನಂಬಿ ಬುಟ್ಟಿ ಹೆಣೆಯುತ್ತಿದ್ದಾರೆ.

Comments

Popular posts from this blog

ದಾವಣಗೆರೆಯಲ್ಲಿ ವಿಜೃಂಭಣೆಯಿಂದ ನಡೆದ ಅಂತರರಾಷ್ಟ್ರೀಯ ಸಂಕೇತ ಭಾಷಾ ದಿನ ಹಾಗೂ ಕಿವುಡರ ಸಪ್ತಾಹ ಕಾರ್ಯಕ್ರಮ

ಚಾರ್ವಿಕ ಟೂರ್ಸ್ ಅಂಡ್ ಟ್ರಾವೆಲ್ಸ್‌ನಿಂದ ಪ್ರಥಮ ವರ್ಷದ ವಾರ್ಷಿಕೋತ್ಸವದ ಧಮಾಕಾ ಆಫರ್; ಕೇವಲ ₹2,100 ರಲ್ಲಿ 4 ವರ್ಷಗಳ ಸುದೀರ್ಘ ಪ್ರವಾಸ ಯೋಜನೆ!

ದಾವಣಗೆರೆ ಕಾರ್ಗಿಲ್​ ಕಾರ್ಖಾನೆಯಲ್ಲಿ ಉತ್ಪಾದನೆ ಸ್ಥಗಿತ: ನ್ಯಾಯಕ್ಕಾಗಿ ಕಾರ್ಮಿಕರು ಹೋರಾಟ